ಅನ್ಯ ಭಾಷೆ ಜತೆಗೆ ಬದುಕಿಗೆ ಮಾತೃಭಾಷೆಯೇ ಸೂಕ್ತ: ಚಿತ್ರನಟ ದೊಡ್ಡಣ್ಣ

| Published : Apr 02 2025, 01:00 AM IST

ಅನ್ಯ ಭಾಷೆ ಜತೆಗೆ ಬದುಕಿಗೆ ಮಾತೃಭಾಷೆಯೇ ಸೂಕ್ತ: ಚಿತ್ರನಟ ದೊಡ್ಡಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿಯ ಬದುಕಿನಲ್ಲಿ ಮಾತೃಭಾಷೆ ಸದಾ ಹಾಸುಹೊಕ್ಕಾಗಿರುತ್ತದೆ. ಮಾತೃಭಾಷೆ ಮರೆತರೆ ತಾಯಿ ಮರೆತಂತೆ. ಸಂವನಹಕ್ಕೆ ಅನ್ಯ ಭಾಷೆ ಇರಲಿ, ಬದುಕಿಗೆ ಮಾತ್ರ ಮಾತೃಭಾಷೆಯೇ ಸೂಕ್ತ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ಕಾನೂನು ಹಬ್ಬ

ಚಿತ್ರದುರ್ಗ: ವ್ಯಕ್ತಿಯ ಬದುಕಿನಲ್ಲಿ ಮಾತೃಭಾಷೆ ಸದಾ ಹಾಸುಹೊಕ್ಕಾಗಿರುತ್ತದೆ. ಮಾತೃಭಾಷೆ ಮರೆತರೆ ತಾಯಿ ಮರೆತಂತೆ. ಸಂವನಹಕ್ಕೆ ಅನ್ಯ ಭಾಷೆ ಇರಲಿ, ಬದುಕಿಗೆ ಮಾತ್ರ ಮಾತೃಭಾಷೆಯೇ ಸೂಕ್ತ ಎಂದು ಚಿತ್ರನಟ ದೊಡ್ಡಣ್ಣ ಹೇಳಿದರು.

ನಗರದ ಸರಸ್ವತಿ ಕಾನೂನುಕ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾನೂನು ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಾತೃಭಾಷೆಯೇ ಬದುಕು ಕಟ್ಟಿಕೊಟ್ಟಿದೆ. ಪೌರಾಣಿಕ, ಮಹಾಭಾರತ ಹಾಗೂ ಮಂಕುತಿಮ್ಮನ ಕಗ್ಗಗಳ ವಿಷಯಗಳನ್ನು ತಿಳಿಸಿಕೊಟ್ಟರು.

ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂವಿಧಾನದ ಆಶಯಗಳ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದರು.

ಕಾನೂನು ಹಬ್ಬದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೀಣಾವಾದನ ದೊಂದಿಗೆ ಭೂಮಿಕಾ ಜಿ.ಆರ್ತ ಪ್ರಾರ್ಥನೆ ನೆರವೇರಿಸಿದರು. ಹೀನ ಕೌಸರ್ ಸ್ವಾಗತಿಸಿದರು. ಎಸ್.ಉದಯ್ ಪ್ರಾಣೇಶ್ ಶರ್ಮ ವಂದಿಸಿದರು. ಬಿ.ಸಿ ಮೇಘನಾ ನಿರೂಪಿಸಿದರು.

ಸರಸ್ವತಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲ, ಪ್ರಾಂಶುಪಾಲೆ ಡಾ.ಎಂ.ಎಸ್. ಸುಧಾದೇವಿ ಇದ್ದರು. ಸಹಾಯಕ ಪ್ರಾಧ್ಯಾಪಕ ಹಾಗೂ ಐಕ್ಯೂಎಸಿ ಕೋ ಆರ್ಡಿನೇಟರ್ ಡಾ.ಎನ್.ಡಿ ಗೌಡ, ವಿದ್ಯಾರ್ಥಿ ಕಾನೂನು ವೇದಿಕೆ ಗೌರವಾಧ್ಯಕ್ಷ ಎಲ್.ಶ್ರೀಶೈಲ, ಸಹಾಯಕ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷ ಡಾ.ಎಸ್.ರವಿ, ಕಾರ್ಯದರ್ಶಿ ಸಿ.ವೆಂಕಣ್ಣ ಹಾಜರಿದ್ದರು.