ಸಾರಾಂಶ
ತರೀಕೆರೆ, ನಮ್ಮ ತಾಯಿ ಭಾಷೆ ಕನ್ನಡವನ್ನು ಮಗುವಿನ ಹಂತದಿಂದಲೇ ಪ್ರೀತಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದರು.
- ಶ್ರಾವಣ ಸಾಹಿತ್ಯ ಸಂಭ್ರಮ ಮತ್ತು ಸೇವಾದೀಕ್ಷಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ತಾಯಿ ಭಾಷೆ ಕನ್ನಡವನ್ನು ಮಗುವಿನ ಹಂತದಿಂದಲೇ ಪ್ರೀತಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಮೃತಾಪುರ ಹೋಬಳಿ ಕಸಾಪ ಘಟಕದಿಂದ ಕುಂಟಿನಮಡು ಡಿ.ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಮತ್ತು ಅಮೃತಾಪುರ ಹೋಬಳಿ ಘಟಕ ಸೇವಾದೀಕ್ಷಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಭಾಷೆ ಎರಡೂವರೆ ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದೆ. ಪುಸ್ತಕ ಓದುವುದು ಮತ್ತು ಬರೆಯವ ಹವ್ಯಾಸ ಹೆಚ್ಚು ರೂಡಿಸಿಕೊಳ್ಳಬೇಕು. ನಮ್ಮ ಕನ್ನಡ ಭಾಷೆ ಯಾವತ್ತೂ ಅಳಿಸಲಾಗದು. ಆಧುವಿಕ ತಂತ್ರಜ್ಞಾನ ಬಳಸಿಕೊಂಡು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಮಾಹಿತಿ ತಲುಪಿಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಶಿಕ್ಷಕರು ಮತ್ತು ಚಂತಕರು ಮುದಿಗೆರೆ ಲೋಹಿತ್ ಕುಮಾರ್ ಸಮಾನತೆ ಸಾಕಾರಗೊಳಿಸುವಲ್ಲಿ ಅನುಭವ ಮಂಟಪ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿಮತ ಬೇಧವಿಲ್ಲದೆ ಎಲ್ಲರೂ ಸರಿ ಸಮಾನರು, ಸಮಾನತೆ ಪರವಾಗಿ ಅನೇಕ ವಚನಕಾರರನ್ನು ಒಗ್ಗೂಡಿಸಿ ಸಮಾಜ ಕಟ್ಟುವ ಕೆಲಸ ಮಾಡಿದರು. ಕಾಯಕದಿಂದ ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕವಾಗಬೇಕು. ಸಹೋದರಿ ಅಕ್ಕನಾಗಲಾಂಬಿಕೆ ಗದ್ಗುಗೆ ನಮ್ಮ ತರೀಕೆರೆಯಲ್ಲಿ ಇರುವುದು ನಮ್ಮ ಪುಣ್ಯ ಎಂದು ಹೇಳಿದರು.ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ ಕನ್ನಡ ಕಲಿತು ಕನ್ನಡಕ್ಕಾಗಿ ಎಲ್ಲರೂ ಶ್ರಮಿಸಬೇಕು. ನೆಲ ಜಲ ಭಾಷೆ ಉಳಿಸಬೇಕು ಎಂದು ಹೇಳಿದರು.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಕನ್ನಡ ನಾಡು ನುಡಿ ಜಲ ಬಾಷೆ ಸಾಹಿತ್ಯ ರಕ್ಷಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ, ಅಮೃತಾಪುರ ಹೋಬಳಿ ಕಸಾಪ ಅಧ್ಯಕ್ಷ ಶಂಕರಪ್ಪ ಅವರಿಗೆ ಕನ್ನಡ ಧ್ವಜ ಹಸ್ತಾಂತರ ನೆರವೇರಿಸಿ ಶುಭಾಷಯ ಕೋರಿದರು.ಎಚ್. ಶಂಕರಪ್ಪ ನಂದಿ ಅವರು ಧ್ವಜ ಸ್ವೀಕರಿಸಿ ಮಾತನಾಡಿ ಕನ್ನಡ ಕಟ್ಟುವ ಕೆಲಸ ನಮ್ಮೆಲ್ಲರ ಜವಾಬ್ದಾರಿ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಸ್ಥಳೀಯರೊಡಗೂಡಿ ಸಮ್ಮೇಳನ ಮಾಡುವ ಆಶಯ ವ್ಯಕ್ತಪಡಿಸಿದರು. ಅಮೃತಾಪುರ ಎ.ಎಸ್.ಈಶ್ವರಪ್ಪ ಮಾತನಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ಮೀನಾಕ್ಷಮ್ಮ, ಜಗದೀಶ್, ಸಂತೋಷ್ ಕುಮಾರ್, ಮನಸುಳಿ ಮೋಹನ್ ಕುಮಾರ್ ಚೇತನಗೌಡ, ಡಿ.ಸುರೇಶ್, ಕೆ.ಸಿ.ಓಂಕಾರಪ್ಪ, ಕಲ್ಲೇಶ್, ಧರಣೇಶ್, ಎಸ್.ಟಿ.ತಿಪ್ಪೇಶಪ್ಪ, ನಿಲಯ ಮೇಲ್ವಿಚಾರಕ ಟಿ.ಸಿ.ದೇವರಾಜ್, ನಿಲಯದ ಮಕ್ಕಳು ಗ್ರಾಮಸ್ತರು ಭಾಗವಹಿಸಿದ್ದರು.-23ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಕುಂಟಿನಮಡುನಲ್ಲಿ ನಡೆದ ಕಾರ್ಯಕ್ರದಲ್ಲಿ ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಅಮೃತಾಪುರ ಹೋಬಳಿ ಕಸಾಪ ಅಧ್ಯಕ್ಷ ಎಚ್. ಶಂಕರಪ್ಪ ನಂದಿ, ಶಿಕ್ಷಕರು ಮತ್ತು ಚಿಂತಕರು ಲೋಹಿತ್ ಕುಮಾರ್ ಭಾಗವಹಿಸಿದ್ದರು.