ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಭಾ ಪುರಸ್ಕಾರದಿಂದ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದು ಕೆಬಿಎಲ್ ಸಿದ್ಧಿ ವಿನಾಯಕ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ. ನಿಂಗರಾಜ್ ಗೌಡ ತಿಳಿಸಿದರು.ನಗರದ ಬಿಇಎಂಎಲ್- ಕೆ.ಆರ್.ಎಸ್ ರಸ್ತೆಯಲ್ಲಿರುವ ಕೆಬಿಎಲ್ ಸಿದ್ಧಿ ವಿನಾಯಕ ದೇವಸ್ಥಾನ ಆವರಣದಲ್ಲಿ ಗೌರಿ- ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ, ಅವರೆಲ್ಲರ ಶಿಕ್ಷಕರು ಮತ್ತು ಪೋಷಕರಿಗೂ ಮಕ್ಕಳು ಸಾಧನೆ ಮಾಡಲೂ ನೆರವಾಗಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕವನ್ನೂ ತೆಗೆದುಕೊಂಡ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಕ್ರೀಡಾ ಸಾಧನೆ ಮಾಡಿದ, ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ 18 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿದ ಮುರುಗೇಶ್, ಗೋಪಾಲ್, ಸುಧೀರ್ ದೇವರಾಜು, ಕಿರಣ್, ಸುರೇಶ್, ಮಹೇಶ್ ಮತ್ತು ಶಿವಣ್ಣ ಅವರನ್ನು ಅಭಿನಂದಿಸಲಾಯಿತು.ಕೆ.ಬಿ.ಎಲ್ ಸಿಲಿಕಾನ್ ಸಿಟಿ ಓನರ್ಸ್ ವೆಲ್ ಫೇರ್ ಅಸೋಸಿಯನ್ ಅಧ್ಯಕ್ಷ ಕೆ.ಎನ್. ಸಂತೋಷ್, ಖಜಾಂಚಿ ಎಂ. ಮೋಹನ್, ಉಮಾಶಂಕರ್ ಆರಾಧ್ಯ, ಎನ್. ಕಿರಣ್, ಬಿ.ಎನ್. ಸುರೇಶ್, ಬಿ.ಬಿ. ಮಧುಕರ್, ನಿತೀನ್, ದೀಲಿಪ್ ಆರಾಧ್ಯ, ಪತ್ರಕರ್ತ ಎಂ.ಆರ್. ಸತ್ಯನಾರಾಯಣ, ರವಿ, ರಾಜು, ವೆಂಕಟೇಶ್, ಪ್ರಶಾಂತ್, ಕೆ. ವಿವೇಕ್ ಗೌಡ, ವೈ.ಎಚ್. ಲೋಹಿತ್ ಕುಮಾರ್, ಡಿ. ಶ್ರೀಕಂಠೇಗೌಡ, ಎಚ್.ಡಿ. ರಮೇಶ್, ಸೂನಗಹಳ್ಳಿ ಮಹೇಶ್, ಪಿ.ಕೆ. ರಮೇಶ್, ಬೆಟ್ಟೇಗೌಡ, ಸುಭಾಷ್ ಗೌಡ, ವಿಜಯ್ ಅರಸ್, ಅರ್ಚಕರಾದ ರತ್ನಾಕರ ಭಾರದ್ವಾಜ್, ಮಜ್ಜಿಗೆಪುರ ಕೆ. ಶಿವರಾಮು, ಕಾರ್ತಿಕ್, ಶ್ರೀನಿವಾಸ್, ಸ್ವಾಮಿ, ಈ.ಸಿ. ವಸಂತಕುಮಾರ್ ಇದ್ದರು.ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ
ಕನ್ನಡಪ್ರಭ ವಾರ್ತೆ ಮೈಸೂರುಆತ್ಮ ತೃಪ್ತಿ ಟ್ರಸ್ಟ್ ಮತ್ತು ಜೆ. ಗೋಪಿ ಸ್ನೇಹ ಬಳಗದ ವತಿಯಿಂದ ನಗರದ ಟಿ.ಕೆ. ಬಡಾವಣೆಯ ವಾರ್ಡ್ 43ರ ಪೌರಕಾರ್ಮಿಕರು ಹಾಗೂ ಯುಜಿಡಿ ನೌಕರರಿಗೆ ಗೌರಿ ಗಣೇಶ ಹಬ್ಬದ ಅಂಗವಾಗಿ ಸೀರೆ, ಬಟ್ಟೆಯನ್ನು ಶಾಸಕ ಕೆ. ಹರೀಶ್ ಗೌಡ ವಿತರಿಸಿದರು. ನಗರಪಾಲಿಕೆ ಮಾಜಿ ಸದಸ್ಯ ಜೆ. ಗೋಪಿ, ಆತ್ಮ ತೃಪ್ತಿ ಟ್ರಸ್ಟ್ ಕಾರ್ಯದರ್ಶಿ ಪ್ರಿಯದರ್ಶಿನಿ, ಕಾಂಗ್ರೆಸ್ ಮುಖಂಡರಾದ ಮಹೇಶ್, ಬಸವರಾಜ್, ಸಚ್ಚಿದಾನಂದ, ಮಣಿ, ರಾಜು, ಬಂಡಳ್ಳಿ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡರು ಇದ್ದರು.ಜೆಎಸ್ಎಸ್ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮಹಿಳಾ ವಿದ್ಯಾರ್ಥಿನಿಲಯದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು.ಈ ವೇಳೆ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ. ಪ್ರಭು, ವಕೀಲ ಪ್ರಸಾದ್, ಸಹಾಯಕ ಪ್ರಾಧ್ಯಾಪಕ ಷಡಕ್ಷರಿ, ನಿಲಯ ಪಾಲಕಿ ಪುಷ್ಪಲತಾ ಮತ್ತು ವಿದ್ಯಾರ್ಥಿನಿಯರು ಇದ್ದರು.