ಮೋಟರ್‌ ರಿಪೇರಿ ಮಾಡುವವನ ಪುತ್ರಿ ರಾಜ್ಯಕ್ಕೆ ತೃತೀಯ ಸ್ಥಾನ

| Published : Apr 09 2025, 12:45 AM IST

ಮೋಟರ್‌ ರಿಪೇರಿ ಮಾಡುವವನ ಪುತ್ರಿ ರಾಜ್ಯಕ್ಕೆ ತೃತೀಯ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ಮೋಟರ್‌ ರಿಪೇರಿ ಮಾಡುವವನ ಪುತ್ರಿ ತನ್ವಿ ಹೇಮಂತ ಪಾಟೀಲ ಅವರು ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ಮೋಟರ್‌ ರಿಪೇರಿ ಮಾಡುವವನ ಪುತ್ರಿ ತನ್ವಿ ಹೇಮಂತ ಪಾಟೀಲ ಅವರು ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.

ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ತನ್ವಿ ಪಾಟೀಲ ಮೂರನೇ ರ್‍ಯಾಂಕ್ ಗಳಿಸಿದ್ದಾರೆ. ಒಟ್ಟು 600 ಅಂಕಗಳ ಪೈಕಿ ತನ್ವಿ ಪಾಟೀಲ 597 ಅಂಕ ಪಡೆದಿದ್ದಾರೆ. ಇಂಗ್ಲಿಷ್​​ 97, ಹಿಂದಿ 100, ಅರ್ಥಶಾಸ್ತ್ರ 100, ಲೆಕ್ಕಶಾಸ್ತ್ರ 100, ವ್ಯವಹಾರ ಅಧ್ಯಯನ 100, ಸಂಖ್ಯಾಶಾಸ್ತ್ರ 100 ಅಂಕ ಗಳಿಸಿದ್ದಾರೆ.ರಾಜ್ಯಕ್ಕೆ ಮೂರನೇ ಸ್ಥಾನ ಬಂದ ಸುದ್ದಿ ತಿಳಿಯುತ್ತಿದ್ದಂತೆ ತನ್ವಿ ತಂದೆ-ತಾಯಿ ಮತ್ತು ಕಾಲೇಜು ಪ್ರಾಧ್ಯಾಪಕರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ತಿನ್ನಿಸಿ ಸಂಭ್ರಮಿಸಿದರು. ಬೆಳಗಾವಿ ಪಿಯು ಡಿಡಿ ಎಂ.ಎಂ.ಕಾಂಬಳೆ ಅವರು ಕೂಡ ತನ್ವಿ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.ಮೊದಲಿನಿಂದಲೂ ಪ್ರತಿಭಾಂತ ವಿದ್ಯಾರ್ಥಿನಿಯಾಗಿರುವ ತನ್ವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಈಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡುವ ಮೂಲಕ ತಾನು ಕಲಿತ ಕಾಲೇಜು ಹಾಗೂ ತಂದೆ, ತಾಯಿಗೆ ಕೀರ್ತಿ ತಂದಿದ್ದಾಳೆ.ಇಂಗ್ಲಿಷ್‌ ವಿಷಯಕ್ಕೆ 100 ಪೈಕಿ 97 ಅಂಕ ಮಾತ್ರ ಬಿದ್ದಿವೆ. ಹಾಗಾಗಿ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ತನ್ವಿ ಅವರು ಭವಿಷ್ಯದಲ್ಲಿ ಚಾರ್ಟರ್ಡ್ ಅಕೌಂಟಂಟ್ ( ಸಿಎ) ಆಗುವ ಆಸೆ ಹೊಂದಿದ್ದಾರೆ.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನದಲ್ಲಿ ಬಂದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನ್ನ ಈ ಸಾಧನೆಗೆ ಕಠಿಣ ಪರಿಶ್ರಮದ ಜೊತೆಗೆ ತಂದೆ, ತಾಯಿ, ಕಾಲೇಜು ಪ್ರಾಚಾರ್ಯ, ಶಿಕ್ಷಕರ ಮಾರ್ಗದರ್ಶನವೂ ಕಾರಣ. ಸಾಧನೆ ಗುರಿ ಹೊಂದುವುದರ ಜೊತೆಗೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಕಾಲೇಜು ತರಗತಿಯಗಳನ್ನು ಕಡ್ಡಾಯವಾಗಿ ಹಾಜರಾಗಬೇಕು. ಭವಿಷ್ಯದಲ್ಲಿ ನನಗೆ ಸಿಎ ಆಗುವ ಆಸೆಯಿದೆ.

-ತನ್ವಿ ಹೇಮಂತ ಪಾಟೀಲ.