ಸಾರಾಂಶ
ಹಿರಿಯೂರು: ತಾಲೂಕಿನ ಜವನಗೊoಡನಹಳ್ಳಿಯಲ್ಲಿ ನೀರಿಗಾಗಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ 125ನೇ ದಿನ ಪೂರೈಸಿದ್ದು, ಸೋಮವಾರ ಬಾಯಿ ಬಡಿದುಕೊಳ್ಳುವ ವಿನೂತನ ಚಳವಳಿ ನಡೆಸಲಾಯಿತು.
ಹಿರಿಯೂರು: ತಾಲೂಕಿನ ಜವನಗೊoಡನಹಳ್ಳಿಯಲ್ಲಿ ನೀರಿಗಾಗಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ 125ನೇ ದಿನ ಪೂರೈಸಿದ್ದು, ಸೋಮವಾರ ಬಾಯಿ ಬಡಿದುಕೊಳ್ಳುವ ವಿನೂತನ ಚಳವಳಿ ನಡೆಸಲಾಯಿತು.
ರೈತರ ಪಾಲಿಗೆ ಸರ್ಕಾರ ಸತ್ತೋಗಿದೆಯಪ್ಪೋ... ಇಲ್ಲಿ ಹೇಳೋರು, ಕೇಳೋರು ಯಾರು ಇಲ್ದಂಗಾದ್ರಲ್ಲಪ್ಪೋ... ತಾಲೂಕು ಮತ್ತು ಜಿಲ್ಲಾಡಳಿತ ಸತ್ತುಹೋಯಿತಲ್ಲಾ ಎಂದು ಪ್ರತಿಭಟನಾಕಾರರು ಬಾಯಿ ಬಡಿದುಕೊಳ್ಳುತ್ತಾ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸರ್ಕಾರದ ನೀತಿಯನ್ನು ಖಂಡಿಸಿದರು.ಮಳೆಗಾಲ ಮುಗಿದರೂ ಕೆರೆಗಳಿಗೆ, ಜಲಾಶಯಕ್ಕೆ ನೀರು ಬಾರದೆ ಇರುವುದರಿಂದ ರೈತರಲ್ಲಿ ಆತಂಕ ಮೂಡಿದೆ. ಮುಂದಿನ ದಿನಗಳಲ್ಲಿ ಫಸಲನ್ನು ಉಳಿಸಿಕೊಳ್ಳುವುದು ಹೇಗೆ ಎಂದು ರೈತರು ಚಿಂತಾ ಕ್ರಾಂತರಾಗಿದ್ದಾರೆ. ಸರ್ಕಾರ ಕೂಡಲೇ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಮುಂದಾಗದಿದ್ದರೆ ಮುಂದಿನ ತಿಂಗಳಲ್ಲಿ ಹಿರಿಯೂರು ಬಂದ್ ಮಾಡಿ ತೀವ್ರ ಚಳವಳಿ ನಡೆಸಲಾಗುವುದು. ರೈತರು ಕೃಷಿ ಚಟುವಟಿಕೆ ಬಿಟ್ಟು ಬೀದಿಯಲ್ಲಿ ಚಳವಳಿ ಮಾಡುತ್ತಾ ಕೂತರೂ ಸಹ ಮುಖ್ಯಮಂತ್ರಿ, ಸಚಿವರು ಸ್ಪಂದಿಸದೆ ಬೈಪಾಸ್ ಮುಖಾಂತರ ಹೋಗುತ್ತಿರುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ರೈತ ಮುಖಂಡರಾದ ಸಿದ್ದರಾಮಣ್ಣ, ರಂಗಸ್ವಾಮಿ, ಸಣ್ಣತಿಮ್ಮಣ್ಣ, ನಿಂಗಪ್ಪ, ಈರಪ್ಪ, ಎಂಆರ್ ವೀರಣ್ಣ, ತಿಪ್ಪೇಸ್ವಾಮಿ, ವಜೂಬ್ ಸಾಬ್, ಮಂಜುನಾಥ್, ರಾಮಕೃಷ್ಣ, ಜಯರಾಮಪ್ಪ, ನಟರಾಜ್ ಮುಂತಾದವರು ಹಾಜರಿದ್ದರು.