ಸಾರಾಂಶ
ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಟ್ಯಾಂಕರ್ ಟಯರ್‌ಗಳಿಗೆ ಬೆಂಕಿ ಹೊತ್ತಿಕೊಂಡ ಲಾರಿಯ ಮುಂಭಾಗ ಸುಟ್ಟ ಕರಕಲಾಗಿದ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದ ಮುಧೋಳ ಹೆದ್ದಾರಿಯ ಶುಕ್ರವಾರ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಟ್ಯಾಂಕರ್ ಟಯರ್‌ಗಳಿಗೆ ಬೆಂಕಿ ಹೊತ್ತಿಕೊಂಡ ಲಾರಿಯ ಮುಂಭಾಗ ಸುಟ್ಟ ಕರಕಲಾಗಿದ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದ ಮುಧೋಳ ಹೆದ್ದಾರಿಯ ಶುಕ್ರವಾರ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ತಾಲೂಕಿನ ಚಾಲಕ ಜಗದೀಶ ಗುರಪ್ಪ ಪಾಟೀಲ ಲಾರಿಯನ್ನು ಲೋಕಾಪುರ ಕಡೆಯಿಂದ ಮುಧೋಳ-ಜಮಖಂಡಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುವ ವೇಳೆ ಸಿದ್ದಾಪೂರ ಗ್ರಾಮದ ಬಳಿ ಟಯರ್‌ಗಳು ಕಾಯ್ದು ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಬೆಂಕಿ ಲಾರಿ ಮುಂಭಾಗಕ್ಕೆ ಆವರಿಸಿದೆ. ತಕ್ಷಣ ಲಾರಿ ಚಾಲಕ ಹಾಗೂ ಕ್ಲೀನರ್ ಇಳಿದು ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.