ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬೈಪಾಸ್ ರಸ್ತೆ, ನಗರಸಭೆ ವ್ಯಾಪ್ತಿಯ ಎನ್‌ಟಿಬಿ ಬಡಾವಣೆ ಹೊಸ ಸಿದ್ದಾಪುರದಲ್ಲಿ ನಿರ್ಮಿಸುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿಯನ್ನು ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು. ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಕಟ್ಟಡದಲ್ಲಿ ಕನ್ನಡ ಕಾರ್ಯಕ್ರಮಗಳು ಶೀಘ್ರವಾಗಿ ನಡೆಯುವಂತೆ ಆಶಿಸಿದರು.

ಭದ್ರಾವತಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬೈಪಾಸ್ ರಸ್ತೆ, ನಗರಸಭೆ ವ್ಯಾಪ್ತಿಯ ಎನ್‌ಟಿಬಿ ಬಡಾವಣೆ ಹೊಸ ಸಿದ್ದಾಪುರದಲ್ಲಿ ನಿರ್ಮಿಸುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿಯನ್ನು ಸಂಸದ ಬಿ.ವೈ ರಾಘವೇಂದ್ರ ವೀಕ್ಷಿಸಿದರು. ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಕಟ್ಟಡದಲ್ಲಿ ಕನ್ನಡ ಕಾರ್ಯಕ್ರಮಗಳು ಶೀಘ್ರವಾಗಿ ನಡೆಯುವಂತೆ ಆಶಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ದೇವರಾಜ್, ಭವನ ನಿರ್ಮಾಣ ಸಮಿತಿ ಪ್ರಮುಖರಾದ ನಾಗೋಜಿರಾವ್, ಎಂ.ಎಸ್ ಸುಧಾಮಣಿ, ಎಂ.ಇ ಜಗದೀಶ್, ಕರಿಯಪ್ಪ ಮತ್ತು ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.