ಸಂಸದ ಡಾ.ಕೆ.ಸುಧಾಕರ್ ಬಣದ ಸದಸ್ಯರು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆ

| Published : Nov 16 2024, 12:34 AM IST

ಸಂಸದ ಡಾ.ಕೆ.ಸುಧಾಕರ್ ಬಣದ ಸದಸ್ಯರು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಸಂಸದ ಡಾ.ಕೆ.ಸುಧಾಕರ್ ಬಣದ ಸುಕನ್ಯಾಮೂರ್ತಿ ಹಾಗೂ ಶಿವರಾಜ್ ಆಯ್ಕೆಯಾದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ಮುಂದಿನ ಅವಧಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಸಂಸದ ಡಾ.ಕೆ.ಸುಧಾಕರ್ ಬಣದ ಸುಕನ್ಯಾಮೂರ್ತಿ ಹಾಗೂ ಶಿವರಾಜ್ ಅವಿರೋಧವಾಗಿ ಆಯ್ಕೆಯಾದರು.

ಮುದ್ದೇನಹಳ್ಳಿಯನ್ನು ಸದಾ ಸ್ವಚ್ಚವಾಗಿಟ್ಟುಕೊಂಡು, ಪಂಚಾಯಿತಿಗೆ ಬರುವ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟು ಪಂಚಾಯಿತಿ ಅಭಿವೃದ್ದಿಗೆ ಮುಂದಿನ ಅಧ್ಯಕ್ಷ- ಉಪಾಧ್ಯಕ್ಷರು ಶ್ರಮವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಲತಾ ಶಿವಕುಮಾರ್ ತಿಳಿಸಿದರು.ನಮ್ಮ ನಾಯಕರಾದ ಸಂಸದ ಡಾ.ಕೆ. ಸುಧಾಕರ್ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಬೇಕು. ಸ್ವಚ್ಛತೆ ಚೆನ್ನಾಗಿರಬೇಕು. ಪಂಚಾಯಿತಿಗೆ ಬರುವ ಜನರಿಗೆ ಸಕಾಲಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿಕೊಡಬೇಕು ಎಂದು ತಿಳಿಸಿದರು.ಈ ವೇಳೆ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ, ಪಿಡಿಒ ತಿಪ್ಪಯ್ಯ ಸದಸ್ಯರಾದ ಸರಸ್ವತಮ್ಮ, ಕೃಷ್ಣಪ್ಪ, ನಂದಿನಿ, ರಮೇಶ್, ಛಾಯಾಕುಮಾರಿ, ಮುದ್ದುಕೃಷ್ಣ ಇತರರು ಇದ್ದರು.

ಸಿಕೆಬಿ-4 ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾದರು.