ಸಾರಾಂಶ
ಗ್ರಾಮಿಣ ಭಾಗದಲ್ಲಿ ಅತ್ಯಾಧುನಿಕ ಲ್ಯಾಬ್, ಕ್ಯಾಥ್ ಯಂತ್ರೋಪಕರಣಗಳು ಮತ್ತು ಸ್ಟಂಟ್ ಅಳವಡಿಕೆಯಂಥ ತಂತ್ರಜ್ಞಾನ ಹೊಂದಿ ಹೃದ್ರೋಗಿಗಳಿಗೆ ತಕ್ಷಣ ಸ್ಪಂದಿಸಿ ಅಮೂಲ್ಯ ಜೀವ ಉಳಿಸುವತ್ತ ಅನುಪ ಆಸ್ಪತ್ರೆ ದಿಟ್ಟ ಹೆಜ್ಜೆ ಇರಿಸಿರುವುದು ಪ್ರಶಂಸನೀಯ ಎಂದು ಹಿರಿಯ ಹೃದ್ರೋಗ ತಜ್ಞ, ಸಂಸದ ಸಿ.ಎನ್. ಮಂಜುನಾಥ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮಿಣ ಭಾಗದಲ್ಲಿ ಅತ್ಯಾಧುನಿಕ ಲ್ಯಾಬ್, ಕ್ಯಾಥ್ ಯಂತ್ರೋಪಕರಣಗಳು ಮತ್ತು ಸ್ಟಂಟ್ ಅಳವಡಿಕೆಯಂಥ ತಂತ್ರಜ್ಞಾನ ಹೊಂದಿ ಹೃದ್ರೋಗಿಗಳಿಗೆ ತಕ್ಷಣ ಸ್ಪಂದಿಸಿ ಅಮೂಲ್ಯ ಜೀವ ಉಳಿಸುವತ್ತ ಅನುಪ ಆಸ್ಪತ್ರೆ ದಿಟ್ಟ ಹೆಜ್ಜೆ ಇರಿಸಿರುವುದು ಪ್ರಶಂಸನೀಯ ಎಂದು ಹಿರಿಯ ಹೃದ್ರೋಗ ತಜ್ಞ, ಸಂಸದ ಸಿ.ಎನ್. ಮಂಜುನಾಥ ಹೇಳಿದರು.ಮಹಾಲಿಂಗಪುರದ ಅನುಪ ಹೃದಯಾಲಯಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ ಅವರು, ಜಿಲ್ಲೆ ಮತ್ತು ಮಹಾಲಿಂಗಪುರ, ರಬಕವಿ-ಬನಹಟ್ಟಿ, ಜಮಖಂಡಿ, ಮುಧೋಳ ತಾಲೂಕಿನ ಗ್ರಾಮೀಣ ಪ್ರದೇಶದ ಬಡಜನತೆಗೂ ಸುಲಭವಾಗಿ ಅತ್ಯಾಧುನಿಕ ತಂತ್ರಜ್ಞಾನ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಡಾ.ವಿಜಯ ಹಂಚಿನಾಳ ಕುಟುಂಬದ ಸದಸ್ಯರು ಜನಹಿತ ಮನೋಭಾವ ಹೊಂದಿರುವುದು ಶ್ಲಾಘನೀಯವೆಂದರು. ಹಿರಿಯ ವೈದ್ಯ ಡಾ.ವಿಜಯ ಹಂಚಿನಾಳ, ಡಾ.ಅನುಪ, ಡಾ.ಅಪೂರ್ವ ಸೇರಿದಂತೆ ಗಣ್ಯರಿದ್ದರು.