ಎಂಪಿ ಚುನಾವಣೆ: ಅಕ್ರಮಗಳ ಕಣ್ಗಾವಲಿಗೆ 7 ಚೆಕ್ ಪೋಸ್ಟ್

| Published : Mar 20 2024, 01:22 AM IST

ಎಂಪಿ ಚುನಾವಣೆ: ಅಕ್ರಮಗಳ ಕಣ್ಗಾವಲಿಗೆ 7 ಚೆಕ್ ಪೋಸ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತ, ಹಾಗೂ ನ್ಯಾಯಸಮ್ಮತವಾಗಿ ನಡೆಸಲು ತಾಲೂಕಿನಲ್ಲಿ ಗಡಿಭಾಗ ಸೇರಿದಂತೆ 7 ಕಡೆ ಚೆಕ್‍ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತ, ಹಾಗೂ ನ್ಯಾಯಸಮ್ಮತವಾಗಿ ನಡೆಸಲು ತಾಲೂಕಿನಲ್ಲಿ ಗಡಿಭಾಗ ಸೇರಿದಂತೆ 7 ಕಡೆ ಚೆಕ್‍ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್‌ ಸಂಜೀವಕುಮಾರ ದಾಸರ ಹೇಳಿದರು. ಅವರು ಕನ್ನಡಪ್ರಭದೊಂದಿಗೆ ಮಾತನಾಡಿ ತಾಲೂಕಿನಲ್ಲಿ ಮಣ್ಣೂರ ಮಾಶಾಳ ಸೊನ್ನ ಅರ್ಜುಣಗಿ ಬಳೂರ್ಗಿ ಚವಡಾಪೂರ ಹಾಗೂ ಮತಕ್ಷೇತ್ರದ ಫರಹತಾಬಾದ ಸೇರಿದಂತೆ ಒಟ್ಟು.7 ಕಡೆ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಪ್ರತಿ ಚೆಕ್‍ ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮೂವರು ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದಾರೆ. ಅಕ್ರಮ ಸಾಗಣೆ ಮಾಡುವ ವಸ್ತುಗಳು,ಮದ್ಯ, ನಗದು ಮತ್ತು ಇನ್ನಿತರೆ ವಸ್ತುಗಳ ಮೇಲೆ ನಿಗಾ ಇಡಲಾಗುತ್ತದೆ. ಈ ಮಾರ್ಗದಲ್ಲಿ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.ವಾಹನ ಸವಾರರು, ಹಾಗೂ ಸಾರ್ವಜನಿಕರು ಚೆಕ್‍ ಪೋಸ್ಟ್‌ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು ಎಂದು ಹೇಳಿದರು