ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರೈಲ್ವೆ ನಿಲ್ದಾಣಕ್ಕೆ ಸಂಸದ ರಮೇಶ ಜಿಗಜಿಣಗಿ ಅವರು ಭೇಟಿ ನೀಡಿ ನಿಲ್ದಾಣದ ಕಟ್ಟಡ ಕಾಮಗಾರಿ ಪ್ರಗತಿ ವೀಕ್ಷಿಸಿದರು.ಈಗಾಗಲೇ ಮೊದಲನೇ ಹಂತದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಆ ಕಟ್ಟಡದಲ್ಲಿ ಒದಗಿಸಲಾದ ಸೌಕರ್ಯಗಳ ಕುರಿತು ಮಾಹಿತಿ ಪಡೆದು ಪ್ರಯಾಣಿಕರಿಗೆ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕೈಗೊಳ್ಳಲು, ನಿರ್ಮಾಣವಾಗಿರುವ ಹೋಟೆಲ್ ಶೀಘ್ರದಲ್ಲೇ ಆರಂಭಿಸಲು ಹಾಗೂ ಜನ ಹೊರಗಡೆಯಿಂದಲೂ ಆ ಸೌಲಭ್ಯ ಬಳಸಿಕೊಳ್ಳುವ ಹಾಗೇ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಎರಡನೇ ಹಂತದ ನಿಲ್ದಾಣ ಕಾಮಗಾರಿಗೆ ಅನುವು ಮಾಡಿಕೊಡಲು ಹಳೆಯ ರೈಲ್ವೆ ನಿಲ್ದಾಣವನ್ನು ಒಡೆದು ಹಾಕಿ ಹೊಸ ನಿಲ್ದಾಣ ನಿರ್ಮಾಣ ಮಾಡಲು ಅನುವಾಗುವಂತೆ ಕಾರ್ಯತ್ವರಿತಗೊಳಿಸುವಂತೆ ಸೂಚಿಸಿದರು.ವಿಜಯಪುರ ನಗರದ ಅಂಡರ್‌ಪಾಸ್‌ಗಳ ಯೋಜನಾ ವಿವರ ಪಡೆದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಅನುಮತಿ ದೊರಕಿಸಿಕೊಡಲು ಸೂಚಿಸಿದರು. ರೈಲ್ವೆ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ರೈಲು ನಿಲ್ದಾಣದಲ್ಲಿ ಗೂಡ್‌ಶೆಡ್ ಇದ್ದ ಭಾಗದಲ್ಲಿ ರೈಲ್ವೆ ಪಿಟ್ ಲೈನ್‌ನ್ನು ನಿರ್ಮಾಣ ಕಾಮಗಾರಿ ಕೈಗೊಳ್ಳಲು ₹50 ಕೋಟಿ ಮೊತ್ತದ ಅನುದಾನ ಮಂಜೂರಾದ ಕುರಿತು ಯಾವ ಹಂತದಲ್ಲಿದೆ. ಮಂಜೂರ ಹಂತದಲ್ಲಿ ಗೊಂದಲ ಪರಿಹಾರಕ್ಕೆ ಅಧಿಕಾರಿಗಳಿಗೆ ತಿಳಿಸಿದರು. ಆಲಮಟ್ಟಿ ರೈಲ್ವೆ ನಿಲ್ದಾಣದ ಕಾಮಗಾರಿ ಪ್ರಗತಿ ವಿವರ ಪಡೆದುಕೊಂಡರು. ರೈಲ್ವೆ ನಿಲ್ದಾಣ ಸ್ವಚ್ಛತೆಯ ಕುರಿತು ಮಾರ್ಗದರ್ಶನ ನೀಡಿದರು. ವಿಜಯಪುರ-ಮಂಗಳೂರ ರೈಲು ನಿರಂತರ ಕುರಿತು ಆದ ಆದೇಶ ಕುರಿತು ಚರ್ಚೆ ನಡೆಸಿದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮಾಧ್ಯಮ ಪ್ರಮುಖ ವಿಜಯ ಜೋಷಿ, ರೈಲ್ವೆ ಇಲಾಖೆ ವ್ಯವಸ್ಥಾಪಕ ಎಂ.ವೈ.ಪಾಟೀಲ ಹಾಗೂ ತಾಂತ್ರಿಕ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.