ಬೆಹರಿನ್, ಕತಾರ್, ದುಬೈ ಮುಂತಾದ ಗಲ್ಫ್‌ ರಾಷ್ಟ್ರಗಳ ಕನ್ನಡಿಗರ ಮನವಿಯಂತೆ, ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಬಗ್ಗೆ ಕೇಂದ್ರ ವಿದೇಶಾಂಗ ಮಂತ್ರಿ ಜೈ ಶಂಕರ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಡಾ. ಸಿ. ಎನ್. ಮಂಜುನಾಥ್ ಸಂಸತ್‌ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಉಡುಪಿ: ಬೆಹರಿನ್, ಕತಾರ್, ದುಬೈ ಮುಂತಾದ ಗಲ್ಫ್‌ ರಾಷ್ಟ್ರಗಳ ಕನ್ನಡಿಗರ ಮನವಿಯಂತೆ, ಯುದ್ಧಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಬಗ್ಗೆ ಕೇಂದ್ರ ವಿದೇಶಾಂಗ ಮಂತ್ರಿ ಜೈ ಶಂಕರ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಡಾ. ಸಿ. ಎನ್. ಮಂಜುನಾಥ್ ಸಂಸತ್‌ಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಯ ಬಗ್ಗೆ ವಿವರಿಸಿದ ಸಚಿವ ಜೈ ಶಂಕರ್, ಆ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ದಾಳಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ, ಆತಂಕ ಬೇಡ ಎಂದು ಭರವಸೆ ಇತ್ತರು.ಲೋಕಸಭೆಯಲ್ಲಿ ಸರ್ಕಾರದ ಪರವಾಗಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ವಿದೇಶಾಂಗ ಮಂತ್ರಿಗಳು ಸೌದಿ, ಓಮನ್, ಜೋರ್ಡನ್, ಬೆಹರಿನ್ ಕುವೈಟ್, ಕತಾರ್ ಸಹಿತ ಜಗತ್ತಿನಾದ್ಯಂತ ಇರುವ ಭಾರತೀಯರನ್ನು ರಕ್ಷಿಸುವ ಹೊಣೆ ಕೇಂದ್ರ ಸರಕಾರ ನಿರ್ವಹಿಸುತ್ತಿದ್ದು, ಈಗಾಗಲೇ 49 ವಿಮಾನಗಳು ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬಂದಿವೆ. ವಿವಿಧ ಸೌಲಭ್ಯಗಳ ಮೂಲಕ 67 ಸಾವಿರ ಜನ ದೇಶಕ್ಕೆ ಬಂದಿದ್ದಾರೆ ಎಂದಿದ್ದಾರೆ ಎಂದು ಕೋಟ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವವರನ್ನು ಭಾರತಕ್ಕೆ ಕರೆ ತರುತ್ತೇವೆ ಎಂದು ಸದನದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಚಿವ ಜೈ ಶಂಕರ್ ಹೇಳಿಕೆ ನೀಡಿದ್ದಾರೆ ಎಂದು ಕೋಟ ಪ್ರಕಟಣೆಯಲ್ಲಿ ಹೇಳಿದ್ದಾರೆ.