ಕೋಟೇಶ್ವರ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಭೇಟಿ

| Published : Jan 24 2025, 12:47 AM IST

ಸಾರಾಂಶ

ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕಾಲೋನಿಯ ಮೂಲಭೂತ ಸೌಕರ್ಯದ ಬಗ್ಗೆ ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಕೋಟೇಶ್ವರ ಗ್ರಾ.ಪಂ.ನ ಮೇಪು ಕೊರಗರ ಕಾಲೋನಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕಾಲೋನಿಯ ಮೂಲಭೂತ ಸೌಕರ್ಯದ ಬಗ್ಗೆ ವಿಚಾರಿಸಿದರು.

ಮೇಪುವಿನ 9 ಕೊರಗ ಕುಟುಂಬಗಳ ಸದಸ್ಯರು ವಾಸ್ತವ್ಯದ ಮನೆ, ಕುಡಿಯುವ ನೀರು, ನಿವೇಶನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿ, ಒಂದೇ ಕುಟುಂಬದಿಂದ ವಿಭಜನೆಗೊಂಡವರಿಗೆ ಹೆಚ್ಚುವರಿ ಭೂಮಿಯ ಅಗತ್ಯವಿದ್ದು, ಕುಡಿಯುವ ನೀರಿಗಾಗಿ ಕಾಲೋನಿಗೆ ವಿಶೇಷ ಕುಡಿಯುವ ನೀರಿನ ಘಟಕ ಒದಗಿಸುವಂತೆ ಕೋರಿಕೆ ಸಲ್ಲಿಸಿದರು.

ಸಂಸದರೊಂದಿಗೆ ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷೆ ಆಶಾ ವಿ. ಸದಸ್ಯರಾದ ರಾಜಶೇಖರ ಶೆಟ್ಟಿ, ಲೋಕೇಶ್ ಅಂಕದಕಟ್ಟೆ, ನೇತ್ರಾವತಿ, ಶ್ರೀಮತಿ ಪುಟ್ಟಿ, ಸುಶೀಲ ಪೂಜಾರ್ತಿ, ನಾಗರಾಜ ಕಾಂಚನ್, ವಿವೇಕ, ಗುತ್ತಿಗೆದಾರರಾದ ರಾಜೇಶ್ ಉಡುಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಪರಿಶಿಷ್ಟ ಪಂಗಡದ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಕೊರಗ ಸಮುದಾಯದ ಮುಖಂಡರಾದ ಗಣೇಶ್ ಕೊರಗ ಕೃಷ್ಣ ಮೇಪು ಮುಂತಾದವರಿದ್ದರು.