ಕೆರೆಕಟ್ಟೆಗೆ ಸಂಸದ ಕೋಟಾ ಭೇಟಿ

| Published : Nov 04 2025, 01:02 AM IST

ಸಾರಾಂಶ

ಶೃಂಗೇರಿ: ಮೃತಪಟ್ಟ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡ ಕುಟುಂಬಸ್ಥರನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ಮಾಡಿದರು.

ಶೃಂಗೇರಿ: ಮೃತಪಟ್ಟ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡ ಕುಟುಂಬಸ್ಥರನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ಮಾಡಿದರು.

ಕುಟುಂಬದವರ ಅಹವಾಲು ಆಲಿಸಿ, ಈ ಘಟನೆ ನಡೆದಿದ್ದು ದುರಾದೃಷ್ಟಕರ. ಇಂತಹ ಘಟನೆ ನಡೆಯ ಬಾರದಿತ್ತು ಎಂದು ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಯಾರೂ ಕೂಡ ರಾಜಕಾರಣ ಮಾಡ ಬಾರದು.ಆರೋಪ ಪ್ರತ್ಯಾರೋಪ ಮಾಡುವ ಬದಲು ಸಮಸ್ಯೆಗೆ ಸ್ಪಂದಿಸಬೇಕು. ಮಾನವೀಯತೆ ಮುಖ್ಯ. ಇಲ್ಲಿನ ಮೂಲನಿವಾಸಿಗಳಿಗೆ ಪುನರ್ವಸತಿ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಕೇಂದ್ರದಿಂದ ಬಿಡುಗಡೆ ಮಾಡಬಹುದು.

ಜಿಲ್ಲಾದಿಕಾರಿಗಳು ಕಳುಹಿಸುವುದಲ್ಲ. ಸರ್ಕಾರ, ಅರಣ್ಯ ಸಚಿವರು ಕೇಂದ್ರಕ್ಕೆ ಕಳುಹಿಸಬೇಕು. 300 ರಿಂದ 400 ಕೋಟಿ ಪರಿಹಾರ ಬೇಕು ಎಂದರೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದಲ್ಲಿ ತುರ್ತಾಗಿ ಬಿಡುಗಡೆಗೆ ಪ್ರಯತ್ನಿಸಬಹುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಉಮೇಶ್ ತಲಗಾರು, ಕೆ.ಎಂ.ಶ್ರೀನಿವಾಸ್,ಬಿಜಿ ಪ್ರಸನ್ನ, ನೂತನ್,ರಾಜೇಶ್ ದ್ಯಾವುಂಟು ಮತ್ತಿತರರು ಇದ್ದರು.

3 ಶ್ರೀ ಚಿತ್ರ 2-

ಶೃಂಗೇರಿ ಕೆರೆಕಟ್ಟೆ ಆನೆದಾಳಿಯಿಂದ ಮೃತರಾದ ಕುಟುಂಬದ ಮನೆಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.