ಸಾರಾಂಶ
- ಸಿದ್ದೇಶ್ವರ ಕುಟುಂಬ ವಿರುದ್ಧ ಸಲ್ಲದ ಆರೋಪ: ಆನಂದರಾಜ
- - - ಕನ್ನಡಪ್ರಭ ವಾರ್ತೆ ದಾವಣಗೆರೆಧೀಮಂತ ರಾಜಕಾರಣಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬದ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಕೆಟ್ಟು ನಿಂತ ಬೋಗಿಯಲ್ಲಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಡಾಳ್ ಮಲ್ಲಿಕಾರ್ಜುನ ಅಪಪ್ರಚಾರ ನಡೆಸಿದ್ದಾರೆ ಎಂದು ಶೋಷಿತ ವರ್ಗಗಳ ಜಿಲ್ಲಾ ಮುಖಂಡ ಬಾಡದ ಆನಂದರಾಜ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಪೋಸ್ಟರ್ ಬಿಡುಗಡೆಗೊಳಿಸಿ, ಅವರು ಮಾತನಾಡಿದರು. ಕೇಂದ್ರದ ಮಾಜಿ ಸಚಿವರೂ ಆದ ಜಿ.ಎಂ.ಸಿದ್ದೇಶ್ವರ ಕುಟುಂಬವನ್ನೇ ಟಾರ್ಗೆಟ್ ಮಾಡಿ ರಾಜಕೀಯ ಜೋಕರ್‌ಗಳಂತಿರುವವರು ಆರೋಪ ಮಾಡುತ್ತಿದ್ದಾರೆ ಎಂದರು.ಮೈಸೂರು ಮಹಾರಾಜರು ಸ್ಥಾಪಿಸಿದ್ದ, ಶತಮಾನದ ಇತಿಹಾಸವಿರುವ ವಿಶ್ವ ಪ್ರಸಿದ್ಧ ಮೈಸೂರು ಸ್ಯಾಂಡಲ್ಸ್ ಹೆಸರನ್ನೇ ಹಾಳು ಮಾಡುವಂತೆ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ ಕುಟುಂಬದವರು ಈಗ ಸಜ್ಜನ ಜಿ.ಎಂ.ಸಿದ್ದೇಶ್ವರ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದೇಶ್ವರ ಮತ್ತು ಕುಟುಂಬದ ವಿರುದ್ಧ ಮಾತನಾಡುತ್ತಿರುವವರು ಆಯಾ ಕ್ಷೇತ್ರಗಳಲ್ಲಿ ಸ್ಥಳೀಯ ಜನರೇ ವಿರೋಧಿಸುತ್ತಿದ್ದಾರೆ. ಅಂತಹವರೇ ಈಗ ಸ್ವಘೋಷಿತ ನಾಯಕರಾಗಿದ್ದಾರೆ ಎಂದು ಟೀಕಿಸಿದರು.
ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಉದ್ದೇಶಪೂರ್ವಕವಾಗಿ ಸಿದ್ದೇಶ್ವರರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲಾ ಜನರ ಗಮನಕ್ಕೂ ಬರುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಇಡೀ ನಾಡಿನ ಜನತೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ. ಆದರೆ, ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಮಾತ್ರ ಕಳಂಕಿತರನ್ನು ಜೊತೆಯಲ್ಲಿಟ್ಟುಕೊಂಡು, ರಾಜಕೀಯ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವುದು ವಿಪರ್ಯಾಸದ ಸಂಗತಿ. ಇನ್ನಾದರೂ ಇಂತಹವರು ಸಿದ್ದೇಶ್ವರ ಮತ್ತು ಕುಟುಂಬ ಗುರಿಯಾಗಿಸಿಕೊಂಡು, ಟೀಕಿಸುವುದು ನಿಲ್ಲಿಸಲಿ ಎಂದು ಬಾಡದ ಆನಂದರಾಜ ಹೇಳಿದರು.ದಲಿತ ಮುಖಂಡ ದಾಗಿನಕಟ್ಟೆ ನಾಗರಾಜ, ನೀಲೋಗಲ್ ಪ್ರಸನ್ನಕುಮಾರ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಸೋಗಿ ಗುರುಶಾಂತ ಇತರರು ಇದ್ದರು.
- - -ಕೋಟ್ ರೇಣುಕಾಚಾರ್ಯರೇ, ಪಾಲಿಕೆ ಮೇಯರ್ ಸ್ಥಾನವು ಬಿಸಿಎಂ ಎ ಮೀಸಲಾಗಿದ್ದನ್ನು ಸಾಮಾನ್ಯ ಮಹಿಳೆಗೆ ತಂದು, ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದೀರಿ. ಬಿಜೆಪಿ ವಶದಲ್ಲಿದ್ದ ಪಾಲಿಕೆ ಆಡಳಿತವನ್ನು ಕಾಂಗ್ರೆಸ್ ವಶವಾಗುವಂತೆ ಮಾಡಿ, ಈಗ ಸಿದ್ದೇಶ್ವರ ಬಗ್ಗೆ ಮಾತನಾಡುತ್ತೀರಾ? ದಲಿತರು, ಹಿಂದುಳಿದವರ ಮೂಲಭೂತ ಹಕ್ಕು ಕಸಿದುಕೊಂಡವರು ನೀವು
- ಬಾಡದ ಆನಂದರಾಜ, ಶೋಷಿತ ವರ್ಗಗಳ ಮುಖಂಡ- - -
-13ಕೆಡಿವಿಜಿ3.ಜೆಪಿಜಿ: ದಾವಣಗೆರೆಯಲ್ಲಿ ಶುಕ್ರವಾರ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ ಇತರರು ಪೋಸ್ಟರ್ ಬಿಡುಗಡೆ ಮಾಡಿದರು.