ಉಚಿತ ಆರೋಗ್ಯ ತಪಾಸಣೆಗೆ ಸಂಸದ ಶ್ರೇಯಸ್‌ ಚಾಲನೆ

| Published : May 05 2025, 12:50 AM IST

ಸಾರಾಂಶ

ಸಾಲಗಾಮೆ ರಸ್ತೆ, ದಾಸರ ಕೊಪ್ಪಲು ೨ನೇ ಹಂತದ ಬಳಿ ನೂತನವಾಗಿ ನಿರ್ಮಿಸಿರುವ ಜಯಶೀಲ ಪಾಲಿಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸಂಸದ ಶ್ರೇಯಸ್ ಎಂ. ಪಟೇಲ್ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಜಯಶೀಲ ಪಾಲಿಕ್ಲಿನಿಕ್‌ಗೆ ಚಾಲನೆ ದೊರಕಿದೆ. ಉತ್ತಮವಾದ ಹಾಗೂ ಬಡವರಿಗೆ ಕೈಗೆಟುಕುವ ರೀತಿಯಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದಾರೆ ಎಂದರು. ಡಾ. ಅನ್ಮೋಲ್ ಅವರು ಉತ್ತಮವಾಗಿ ಮಾನವಿಯತೆ ಉಳ್ಳ ವೈದ್ಯರು ಎಂದರೇ ತಪ್ಪಾಗಲಾರದು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಾಲಗಾಮೆ ರಸ್ತೆ, ದಾಸರ ಕೊಪ್ಪಲು ೨ನೇ ಹಂತದ ಬಳಿ ನೂತನವಾಗಿ ನಿರ್ಮಿಸಿರುವ ಜಯಶೀಲ ಪಾಲಿಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸಂಸದ ಶ್ರೇಯಸ್ ಎಂ. ಪಟೇಲ್ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ಜಯಶೀಲ ಪಾಲಿಕ್ಲಿನಿಕ್‌ಗೆ ಚಾಲನೆ ದೊರಕಿದೆ. ಉತ್ತಮವಾದ ಹಾಗೂ ಬಡವರಿಗೆ ಕೈಗೆಟುಕುವ ರೀತಿಯಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದಾರೆ ಎಂದರು. ಡಾ. ಅನ್ಮೋಲ್ ಅವರು ಉತ್ತಮವಾಗಿ ಮಾನವಿಯತೆ ಉಳ್ಳ ವೈದ್ಯರು ಎಂದರೇ ತಪ್ಪಾಗಲಾರದು. ಜೊತೆಗೆ ನುರಿತ ವೈದ್ಯರು. ಉತ್ತಮ ಆರೋಗ್ಯಕ್ಕೆ ಆಸ್ಪತ್ರೆ ಸಹಕಾರಿಯಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಗಳು ಕೂಡ ಹೆಚ್ಚಾಗುತ್ತಾ ಹೋಗುತ್ತಿದೆ. ಪ್ರಾಥಮಿಕ ಹಂತದಲ್ಲೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕುಟುಂಬದ ಜೊತೆ ಆರೋಗ್ಯ ಜೀವನ ಸಾಗಿಸಬಹುದು ಎಂದು ಕಿವಿಮಾತು ಹೇಳಿದರು.

ಪ್ರಾರಂಭೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆಯಲ್ಲಿ ಬ್ಲಡ್ ಶುಗರ್, ರಕ್ತದೊತ್ತಡ, ಕಾಲಿನ ನರಗಳ ಪರೀಕ್ಷೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರೀತಂ ಜೆ. ಗೌಡ, ಶ್ರೀ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ, ಸಂಸದರ ಮಾವ ಲಕ್ಷ್ಮೇಗೌಡ, ಕಂಬದ ನರಸಿಂಹ ಸೇವಾ ಸಮಿತಿಯ ದೇವರಾಜು, ಫ್ಯಾಮಿಲಿ ಫಿಜಿಷಿಯನ್ ಡಾ. ಎಚ್. ನಾಗರಾಜು, ಫಿಜಿಷಿಯನ್ ಡಾ. ಎಚ್.ಆರ್‌. ಕೃಷ್ಣೇಗೌಡ, ನ್ಯೂರೋ ಸರ್ಜನ್ ಡಾ. ಎನ್. ಅನ್ಮೋಲ್, ಕ್ಯಾನ್ಸರ್ ಸರ್ಜನ್ ಡಾ. ಸುಶ್ರುತ ಹಾಗೂ ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನ ಇತರರು ಭಾಗವಹಿಸಿದ್ದರು