ಕ್ರೀಡೆಗೆ ಪೋತ್ರಾಹ ನೀಡುವ ಸಲುವಾಗಿ ಸಂಸದರ ಕ್ರೀಡಾ ಮಹೋತ್ಸವ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ರಾಣಿಬೆನ್ನೂರು: ಕ್ರೀಡೆಗೆ ಪೋತ್ರಾಹ ನೀಡುವ ಸಲುವಾಗಿ ಸಂಸದರ ಕ್ರೀಡಾ ಮಹೋತ್ಸವ ಆಯೋಜನೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಸ್ಥಳೀಯ ನಗರಸಭಾ ಕ್ರೀಡಾಂಗಣದಲ್ಲಿ ಜ. 28, 29ರಂದು ನಡೆಯಲಿರುವ ಸಂಸದರ ಕ್ರೀಡಾ ಮಹೋತ್ಸವದ ಸಿದ್ಧತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಗುಂಪು ವಿಭಾಗದಲ್ಲಿ 50 ಹಾಗೂ ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಲು 100 ಜನರು ನೋಂದಣಿ ಮಾಡಿಸಿದ್ದಾರೆ. ಹೊನಲು ಬೆಳಕಿನಲ್ಲಿ ಕಬಡ್ಡಿ, ವಾಲಿಬಾಲ್, ಖೋ ಖೋ ಪಂದ್ಯಾವಳಿಗಳನ್ನು ನಡೆಸಲಾಗುವುದು. ಕಬಡ್ಡಿ ಪಂದ್ಯಗಳನ್ನು ಪ್ರೋ ಕಬಡ್ಡಿ ಮಾದರಿಯಲ್ಲಿ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಜನ್ಮದಿನವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು ಹಾಗೂ ಸ್ಥಳೀಯ ಮಾಜಿ ಕ್ರೀಡಾಪಟುಗಳನ್ನು, ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ಕೆ.ಶಿವಲಿಂಗಪ್ಪ, ಮಂಜುನಾಥ ಕಾಟಿ, ನಿಂಗಪ್ಪ ಕೋಡಿಹಳ್ಳಿ, ಮಲ್ಲಿಕಾರ್ಜುನ ಅಂಗಡಿ, ಮಾಳಪ್ಪ ಪೂಜಾರ, ಕುಬೇರ ಕೊಂಡಜ್ಜಿ, ಪವನಕುಮಾರ ಮಲ್ಲಾಡದ, ದಯಾನಂದ ಪಾಟೀಲ, ಚೋಳಪ್ಪ ಕಸವಾಳ. ರಮೇಶ ಕರಡೆಣ್ಣನವರ ಮತ್ತಿತರರಿದ್ದರು.