ಹಂದರಗಂಬ ಪೂಜೆ ನೆರವೇರಿಸಿದ ಪ್ರಸನ್ನಾನಂದ ಶ್ರೀ

| Published : Jan 29 2025, 01:33 AM IST

ಸಾರಾಂಶ

ಫೆ.8 ಮತ್ತು 9ರಂದು ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಮಂಗಳವಾರ ಪ್ರಸನ್ನಾನಂದ ಶ್ರೀಗಳು ಹಂದರಗಂಬ ಪೂಜೆ ನೇರವೇರಿಸಿದ್ದಾರೆ.

ಹರಿಹರ: ಫೆ.8 ಮತ್ತು 9ರಂದು ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಮಂಗಳವಾರ ಪ್ರಸನ್ನಾನಂದ ಶ್ರೀಗಳು ಹಂದರಗಂಬ ಪೂಜೆ ನೇರವೇರಿಸಿದರು.

ಶ್ರೀ ವಾಲ್ಮೀಕಿ ಜಾತ್ರೆಯ ಆರಂಭದ ಉದ್ದೇಶ ಸಫಲವಾಗುತ್ತಿದೆ. ನಮ್ಮ ಉದ್ದೇಶದಂತೆ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ ಬೆಳೆಸಲು, ಮೌಢ್ಯಗಳ ನಿವಾರಣೆ ಪ್ರಯತ್ನಕ್ಕೆ ಸಮಾಜ ಬಾಂಧವರು ಸಹಕರಿಸುತ್ತಿದ್ದಾರೆ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ 18ನೇ ಪುಣ್ಯಾರಾಧನೆ, ನಮ್ಮ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಆಯೋಜಿಸಲಾಗಿದೆ. 2 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಸಭೆ, ಜನಜಾಗೃತಿ ಸಮಾವೇಶ ನಡೆಯಲಿದೆ. ನಾಡಿನ ವಿವಿಧ ಮಠಾದೀಶರು, ಮುಖ್ಯಮಂತ್ರಿ ಸೇರಿದಂತೆ ಸಚಿವರು, ವಿಪಕ್ಷದ ನಾಯಕರು, ಶಾಸಕರು, ಸಂಸದರು, ವಿದ್ವಾಂಸರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಭ ಜಗಳೂರಿನ ಶಾಸಕ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಿ.ದೇವೇಂದ್ರಪ್ಪ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ, ಧರ್ಮದರ್ಶಿ ಶಕುಂತಲಾ ರಾಜಣ್ಣ, ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ, ಜಿ.ಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಿಮ್ಮೇನಹಳ್ಳಿ ಚಂದ್ರಪ್ಪ, ನಿವೃತ್ತ ಅಧಿಕಾರಿ ಮಾರಪ್ಪ ನಾಯಕ, ಗ್ರಾಪಂ ಅಧ್ಯಕ್ಷೆ ಹೇಮಾವತಿ ರಾಮಪ್ಪ, ಸದಸ್ಯ ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು.

- - -

-28ಎಚ್‍ಆರ್‍ಆರ್02:

ಹರಿಹರ ತಾಲೂಕಿನ ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ನಿಮಿತ್ತ ಹಂದರಗಂಬ ಪೂಜೆ ನೇರವೇರಿಸಲಾಯಿತು. ಪ್ರಸನ್ನಾನಂದ ಶ್ರೀ, ಶಾಸಕ. ಬಿ.ದೇವೇಂದ್ರಪ್ಪ, ಶ್ರೀನಿವಾಸ ದಾಸಕರಿಯಪ್ಪ ಹಾಗೂ ಇತರರಿದ್ದರು.