ಆತ್ಮಹತ್ಯೆಗೊಳಗಾದ ಯುವತಿ ಮನೆಗೆ ಶ್ರೀಗಳ ಭೇಟಿ

| Published : Dec 11 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಾಲತವಾಡ ಇತ್ತೀಚೆಗೆ ಪೋಕ್ಸೋ ದೂರು ದಾಖಲಿಸಿದ್ದಕ್ಕೆ ಆರೋಪಿಗಳು ಜೀವ ಬೆದರಿಕೆವೊಡ್ಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ ಮನೆಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸೋಮವಾರ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ಹೇಳಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಇತ್ತೀಚೆಗೆ ಪೋಕ್ಸೋ ದೂರು ದಾಖಲಿಸಿದ್ದಕ್ಕೆ ಆರೋಪಿಗಳು ಜೀವ ಬೆದರಿಕೆವೊಡ್ಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ ಮನೆಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸೋಮವಾರ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ಹೇಳಿದರು.ಘಟನೆ ಬಗ್ಗೆ ಶ್ರೀಗಳು ಸಂಪೂರ್ಣ ಮಾಹಿತಿ ಪಡೆದು ಸಮಾಜದವರಿಗೆ ತಾಯಿಯನ್ನು ಎಲ್ಲರು ಕಾಳಜಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದರು. ನಂತರ ವಸತಿ ಶಾಲೆ ಆವರಣದಲ್ಲಿ ದೌರ್ಜನ್ಯಕ್ಕೊಳಗಾದ ಯುವತಿ ಮನೆಗೂ ಕೂಡ ಭೇಟಿ ನೀಡಿ ಯಾವದೇ ಕಾರಣಕ್ಕು ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮ ಹಿಂದೆ ವಾಲ್ಮೀಕಿಯ ಸಮಾಜವಿದೆ ಎಂದು ಆತ್ಮಸ್ಥೈರ್ಯ ತುಂಬಿದರು.ಮುದ್ದೇಬಿಹಾಳ ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಬಲಭೀಮ ನಾಯಕಮಕ್ಕಳ ಮಾತನಾಡಿ, ನಮ್ಮ ಸಮಾಜದ ಯುವತಿಯರಿಗೆ ಅನ್ಯಾಯವಾಗಿದೆ. ಈಗಾಗಲೆ ಈ ಬಗ್ಗೆ ದೂರು ದಾಖಲಿಸಿದ್ದೇವೆ, ಆರೋಪಿಗಳು ದೂರು ಕೊಟ್ಟ ಯುವತಿಗೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದು ನಮ್ಮ ಸಮಾಜದ ಬೇಡಿಕೆ ಇದೆ, ಮತ್ತೊಂದು ಯುವತಿಯ ಕುಟುಂಬಕ್ಕೆ ಪೋಲೀಸರು ಸೂಕ್ತ ರಕ್ಷಣೆ ನೀಡಬೇಕು. ಶೀಘ್ರ ತನಿಖೆ ಮಾಡಿ ತಪ್ಪಿತಸ್ಥ ಆರೋಪಿಗಳಿಗೆ ಶಿಕ್ಷೆ ಆಗಬೇಕು. ನಮ್ಮ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ನಾವು ಸುಮ್ಮನಿರುವುದಿಲ್ಲ. ಯಾರೆ ನಿಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಗಮನಕ್ಕೆ ತರುವಂತೆ ತಿಳಿ ಹೇಳಿದರು.ಈ ವೇಳೆ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಪಿ.ಕವಲಗಿ, ಮುದ್ದೇಬಿಹಾಳ ನಂದಾಶ್ರಮದ ಡಾ.ಲಾಲಲಿಂಗ ಶ್ರೀಗಳು, ಜಿಲ್ಲಾ ಎಸ್ಟಿ ನೌಕರ ಸಂಘದ ಅಧ್ಯಕ್ಷ ಬಿ.ಬಿ.ಬಿರಾದಾರ, ಬೀದರ ಧರ್ಮದರ್ಶಿ ದಶರಥ ಜಮಾದಾರ, ವೀರೇಶ ಹವಾಲ್ದಾರ, ಹಣಮಂತ ಯರಗೋಡಿ, ಅಂಬ್ರೇಶ ಹಟ್ಟಿ, ಸುರೇಶ ಕಾರಕೂರ ಇನ್ನಿತರರು ಇದ್ದರು.