ಮಾನಂಪಾಡಿ ಸರ್ಕಾರಿ ಶಾಲೆಗೆ ಎಂಆರ್‌ಪಿಎಲ್‌ನಿಂದ ಶೌಚಾಲಯ ನಿರ್ಮಾಣ

| Published : Jul 14 2024, 01:42 AM IST

ಮಾನಂಪಾಡಿ ಸರ್ಕಾರಿ ಶಾಲೆಗೆ ಎಂಆರ್‌ಪಿಎಲ್‌ನಿಂದ ಶೌಚಾಲಯ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಜುಲೈ 1ರಿಂದ 15ರ ವರೆಗೆ ಸಂಸ್ಥೆಯ ಸ್ವಚ್ಛತಾ ಪಕ್ವಾಡದ ಅಂಗವಾಗಿ ಜಿಲ್ಲೆಯಲ್ಲಿ ಸ್ಚಚ್ಛತೆಗೆ ಸಂಬಂಧಪಟ್ಟಂತೆ ವಿವಿಧ‌ಕಾರ್ಯಕ್ರಮಗಳನ್ನು‌ ಹಮ್ಮಿಕೊಂಡಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸರ್ಕಾರಿ ಶಿಕ್ಷಣ ಸಂಸ್ಥೆಗೆ ಮೂಲಭೂತ ಸೌಕರ್ಯ ಒದಗಿಸುವುದು ಅಗತ್ಯವಾಗಿದ್ದು, ಶಾಲೆಗಳಿಗೆ ಶೌಚಾಲಯದಂತಹ ಮೂಲಭೂತ ಸೌಕರ್ಯ ಒದಗಿಸುವ ಎಂ.ಆರ್.ಪಿ.ಎಲ್ ಕಾರ್ಯ ಅಭಿನಂದನೀಯ ಎಂದು ಮಂಗಳೂರು ರಾಮಕೃಷ್ಣ ಅಶ್ರಮದ ಶ್ರೀ ಜಿತಕಾಮಾನಂದಜಿ ಸ್ವಾಮೀಜಿ ಹೇಳಿದರು.ಮೂಲ್ಕಿಯ ಮಾನಂಪಾಡಿ ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್‌ ಸಂಸ್ಥೆಯಿಂದ ನಿರ್ಮಿಸಿಕೊಟ್ಟ ಶೌಚಾಲಯವನ್ನು ಉದ್ಘಾಟಿಸಿ‌ ಮಾತನಾಡಿದರು. ಎಂಆರ್‌ಪಿಎಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಮಾತನಾಡಿ, ಸಂಸ್ಥೆಯು ತನ್ನ ಲಾಭದ ಒಂದು ಅಂಶವನ್ನು ಸಮಾಜಕ್ಕಾಗಿ ಮೀಸಲಿರಿಸಿದ್ದು, ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗೆ ಮುಖ್ಯವಾಗಿ ಒತ್ತು ನೀಡುತ್ತಿದ್ದೇವೆ, ಈ ಬಾರಿ 20 ಸರ್ಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ, ಜುಲೈ 1ರಿಂದ 15ರ ವರೆಗೆ ಸಂಸ್ಥೆಯ ಸ್ವಚ್ಛತಾ ಪಕ್ವಾಡದ ಅಂಗವಾಗಿ ಜಿಲ್ಲೆಯಲ್ಲಿ ಸ್ಚಚ್ಛತೆಗೆ ಸಂಬಂಧಪಟ್ಟಂತೆ ವಿವಿಧ‌ಕಾರ್ಯಕ್ರಮಗಳನ್ನು‌ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭ ನೂತನವಾಗಿ ಪ್ರಾರಂಭಗೊಂಡ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ಉದ್ಯಮಿ ಸಂತೋಷ್ ಶೆಟ್ಟಿ ಅವರಿಂದ ಉಚಿತ ಪುಸ್ತಕ ವಿತರಣೆ ನಡೆಯಿತು. ಎಂಆರ್‌ಪಿಎಲ್‌ ಅಧಿಕಾರಿಗಳಾದ ಪ್ರಶಾಂತ್ ಬಾಳಿಗ, ಸ್ಟೀವನ್ ಪಿಂಟೋ ಮತ್ತು ಶೌಚಾಲಯ ಗುತ್ತಿಗೆದಾರ , ದೇವಣ್ಣ ನಾಯ್ಕ ಅವರನ್ನು ಗೌರವಿಸಲಾಯಿಸಲಾಯಿತು.

ಶಾಲಾ ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಆಂಗ್ಲ ಮಾಧ್ಯಮ ಶಾಲೆ ಸಮಿತಿ ಅಧ್ಯಕ್ಷ ವಿಶ್ವನಾಥ ಭಟ್, ಹಳೆ ವಿದ್ಯಾರ್ಥಿ ಸಂಘದ ನಾರಾಯಣ ಶಣೈ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಸುನೀಲ್ ಅಳ್ವ, ಮಾಜಿ ಸದಸ್ಯ ಉಮೇಶ್ ಮಾನಂಪಾಡಿ, ಉದ್ಯಮಿ ಸಂತೋಷ್ ಶೆಟ್ಟಿ, ಮೂಲ್ಕಿ ಕ್ಲಸ್ಟರ್‌ ಸಿಆರ್‌ಪಿ ವಿವಿಲ ಪಿಂಟೋ, ಗುತ್ತಿಗೆದಾರ ದೇವಣ್ಣ ನಾಯ್ಕ ಮತ್ತಿತರರು ಉಪಸ್ಥತರಿದ್ದರು. ಅನಿತಾ ಲೀಸಿ ಪಿಂಟೋ ಸ್ವಾಗತಿಸಿದರು. ಶಿಕ್ಷಕಿ ಶೋಭಾ ವಂದಿಸಿದರು. ವಸಂತಿ ಕುಮಾರಿ ನಿರೂಪಿಸಿದರು.