ಎಂಆರ್ ಪಿಎಲ್ ಹಸಿರು ವಲಯ ಭೂ ಸ್ವಾಧೀನ: ಪರಿಹಾರಕ್ಕೆ ಒಮ್ಮತ

| Published : Jul 20 2025, 01:19 AM IST

ಎಂಆರ್ ಪಿಎಲ್ ಹಸಿರು ವಲಯ ಭೂ ಸ್ವಾಧೀನ: ಪರಿಹಾರಕ್ಕೆ ಒಮ್ಮತ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಎಕರೆಗೆ 80 ಲಕ್ಷ ರು. ಪರಿಹಾರ, ಉದ್ಯೋಗ ಬದಲು ಪ್ರತಿ ಕುಟುಂಬಕ್ಕೆ 20 ಲಕ್ಷ ರು. ನಗದು ಮತ್ತು ನಿವೇಶನ ಸೇರಿದಂತೆ ಪರಿಹಾರ ನೀಡಲು ಎಂಆರ್ ಪಿಎಲ್ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಲವು ವರ್ಷಗಳಿಂದ ಬಾಕಿ ಇರುವ ಈ ವಿಷಯವನ್ನು ಎಲ್ಲರಿಗೂ ತೃಪ್ತಿಕರವಾಗಿ ಇತ್ಯರ್ಥ ಪಡಿಸಬೇಕು. ನಿರ್ವಸಿತರ ಸಮಸ್ಯೆಯ ತೀವ್ರತೆ ನನಗೆ ಅರಿವಿದ್ದು, ಉತ್ತಮ ಪ್ಯಾಕೇಜ್ ದೊರಕಬೇಕು ಎಂದು ಸಂಸದರು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಎಂಆರ್ ಪಿಎಲ್ ಹಸಿರು ವಲಯ ನಿರ್ಮಾಣ ಸಂಬಂಧ 27 ಎಕರೆ ಭೂಸ್ವಾಧೀನಕ್ಕೆ ನಿರ್ವಸಿತರಿಗೆ ಸೂಕ್ತ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಪ್ರತಿ ಎಕರೆಗೆ 80 ಲಕ್ಷ ರು. ಪರಿಹಾರ, ಉದ್ಯೋಗ ಬದಲು ಪ್ರತಿ ಕುಟುಂಬಕ್ಕೆ 20 ಲಕ್ಷ ರು. ನಗದು ಮತ್ತು ನಿವೇಶನ ಸೇರಿದಂತೆ ಪರಿಹಾರ ನೀಡಲು ಎಂಆರ್ ಪಿಎಲ್ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಲವು ವರ್ಷಗಳಿಂದ ಬಾಕಿ ಇರುವ ಈ ವಿಷಯವನ್ನು ಎಲ್ಲರಿಗೂ ತೃಪ್ತಿಕರವಾಗಿ ಇತ್ಯರ್ಥ ಪಡಿಸಬೇಕು. ನಿರ್ವಸಿತರ ಸಮಸ್ಯೆಯ ತೀವ್ರತೆ ನನಗೆ ಅರಿವಿದ್ದು, ಉತ್ತಮ ಪ್ಯಾಕೇಜ್ ದೊರಕಬೇಕು ಎಂದು ಸಂಸದರು ಹೇಳಿದರು.

ಇಲ್ಲಿನ 27 ಎಕರೆಯಲ್ಲಿ 408 ಡೋರ್ ನಂಬರ್ ಗಳಿದ್ದು, ಸಮೀಕ್ಷೆಯಂತೆ 93.96 ಕೋಟಿ ರು. ಭೂಸ್ವಾಧೀನ ಮತ್ತಿತರ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ನಡೆಸಿದ ಕೆಪಿಟಿ ಸಂಸ್ಥೆ ವರದಿ ನೀಡಿದೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಎಂಆರ್ ಪಿಎಲ್ ಸಲ್ಲಿಸಿರುವ ಪ್ಯಾಕೇಜ್ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಭೂಸ್ವಾಧೀನಗೊಳ್ಳುವ 27 ಎಕರೆ ಜಮೀನು ಜೋಕಟ್ಟೆ ಮತ್ತು ಬಾಳ ಗ್ರಾ.ಪಂ ಹಾಗೂ ಬಜಪೆ ಪ.ಪಂ. ವ್ಯಾಪ್ತಿಯಲ್ಲಿದ್ದು, ಈ ಪ್ರದೇಶಗಳಲ್ಲಿ ಹೊಸದಾಗಿ ಡೋರ್ ನಂಬರ್ ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಎಂಆರ್ ಪಿಎಲ್ ಎಂ.ಡಿ. ಶ್ಯಾಂಪ್ರಸಾದ್, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ರಾಜು, ನಿರ್ವಸಿತರ ಸಮಿತಿ ಮುಖಂಡ ಮುನೀರ್ ಕಾಟಿಪಳ್ಳ ಮತ್ತಿತರರು ಇದ್ದರು.