ಎಂಆರ್‌ಪಿಎಲ್‌: 1 ಸಾವಿರ ರಿಟೇಲ್‌ ಔಟ್‌ಲೆಟ್‌ ತೆರೆಯುವ ಗುರಿ

| Published : Nov 10 2023, 01:00 AM IST

ಎಂಆರ್‌ಪಿಎಲ್‌: 1 ಸಾವಿರ ರಿಟೇಲ್‌ ಔಟ್‌ಲೆಟ್‌ ತೆರೆಯುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಎಂಆರ್ರ್‌ಪಿಎಲ್ಲ್‌: ಒಂದು ಸಾವಿರ ರಿಟೇಲ್ಲ್‌ ಓಟ್ಟ್‌ಲೆಟ್ಟ್‌ ತೆರೆಯುವ ಗುರಿ

ಕನ್ನಡಪ್ರಭ ವಾರ್ತೆ ಮಂಗಳೂರು

ಗ್ರಾಹಕ ಅರಿವು ಸಪ್ತಾಹದ ಅಂಗವಾಗಿ ಎಂಆರ್‌ಪಿಎಲ್‌ನ ರಿಟೇಲ್‌ ಔಟ್‌ಲೆಟ್‌ ಡೀಲರ್‌ಗಳ ಸಮಾವೇಶ ಎಂಆರ್‌ಪಿಎಲ್‌ ಉದ್ಯೋಗಿಗಳ ಕ್ಲಬ್‌ನಲ್ಲಿ ನಡೆಯಿತು. ಕರ್ನಾಟಕ ಹಾಗೂ ಕೇರಳ ರಾಜ್ಯದ ಎಲ್ಲ 75 ಡೀಲರ್‌ಗಳು ಇದರಲ್ಲಿ ಭಾಗವಹಿಸಿದ್ದರು.

ಯೋಜನಾ ಕಾರ್ಯನಿರ್ವಾಹಕ ನಿರ್ದೇಶಕ ಬಿಎಚ್‌ವಿ ಪ್ರಸಾದ್‌ ಮಾತನಾಡಿ, ಎಂಆರ್‌ಪಿಎಲ್‌ನ ರಿಟೇಲ್‌ ಜಾಲವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಇದೆ. 2027ರ ವೇಳೆಗೆ ಎಂಆರ್‌ಪಿಎಲ್‌ ಪೆಟ್ರೋಲಿಯಂ ಉತ್ಪನ್ನಗಳ ರಿಟೇಲ್‌ ಮಾರಾಟವನ್ನು 1 ಮಿಲಿಯನ್‌ ಕೆಎಲ್‌ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಅಲ್ಲದೆ ತಮಿಳ್ನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ 1 ಸಾವಿರ ರಿಟೇಲ್‌ ಔಟ್‌ಲೆಟ್‌ ತೆರೆಯುವ ಇರಾದೆ ಇದೆ ಎಂದರು.

ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ವರ್ಮಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ವಿಜಿಲೆನ್ಸ್‌ ಅಧಿಕಾರಿ ಗಣೇಶ್‌ ಎಸ್‌.ಭಟ್‌, ಹಣಕಾಸು ವಿಭಾಗ ನಿರ್ದೇಶಕ ವಿವೇಕ್‌ ಚಂದ್ರಕಾಂತ್‌ ಟೊಂಗಾವ್ಕರ್‌ ರಿಟೇಲ್‌ ವಿಭಾಗದ ಜನರಲ್‌ ಮೆನೇಜರ್‌ ಶಿವರಾಮ ಕೃಷ್ಣನ್‌ ಮಾತನಾಡಿದರು.

ಮಾರುಕಟ್ಟೆ ವಿಭಾಗದ ಜಿಜಿಎಂ ದೀಪಕ್‌ ಪ್ರಭಾಕರ್‌ ಸ್ವಾಗತಿಸಿದರು. ಸುದರ್ಶನ್‌ ವಂದಿಸಿದರು.