ಜೋಕಟ್ಟೆ ಎಂ ಆರ್ ಪಿ ಎಲ್ ನಲ್ಲಿ ಬುಧವಾರ ನಡೆದ ಸ್ಪೋಟದಲ್ಲಿ ಮೃತಪಟ್ಟಿರುವ ಹಳೆಯಂಗಡಿಯ ನಿವಾಸಿ ಮನೀಶ್ ಕರ್ಕಡರಿಗೆ ಹಳೆಯಂಗಡಿಯ ಸಿ ಎಸ್ ಐ ಅಮ್ನನ್ ಸ್ಮಾರಕ ಚರ್ಚ್ ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಸಂಜೆ ಅಂತಿಮ ಸಂಸ್ಕಾರವು ನಡೆಯಿತು. ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರವಾಗಿ 1 ಕೋಟಿ ರು. ನೀಡಬೇಕು ಮತ್ತು ಮೃತರ ಕುಟುಂಬದ ಸದಸ್ಯರಿಗೆ ಖಾಯಂ ಉದ್ಯೋಗ ಹಾಗೂ ಟ್ರಸ್ಟ್ ನಲ್ಲಿ ಉದ್ಯೋಗ ನೀಡಬೇಕು, ಕಳೆದ ಹಲವು ವರ್ಷಗಳಿಂದ ಬಾಕಿ ಇದ್ದ, ಇಎಸ್‌ಐನಿಂದ ವಂಚಿತರಾದ ಕಾರ್ಮಿಕರಿಗೆ ಆರೋಗ್ಯ ವಿಮೆ ನೀಡಬೇಕೆಂದು ಆಗ್ರಹಿಸಲಾಯಿತು.
ಮೂಲ್ಕಿ: ಜೋಕಟ್ಟೆ ಎಂ ಆರ್ ಪಿ ಎಲ್ ನಲ್ಲಿ ಬುಧವಾರ ನಡೆದ ಸ್ಪೋಟದಲ್ಲಿ ಮೃತಪಟ್ಟಿರುವ ಹಳೆಯಂಗಡಿಯ ನಿವಾಸಿ ಮನೀಶ್ ಕರ್ಕಡರಿಗೆ ಹಳೆಯಂಗಡಿಯ ಸಿ ಎಸ್ ಐ ಅಮ್ನನ್ ಸ್ಮಾರಕ ಚರ್ಚ್ ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಸಂಜೆ ಅಂತಿಮ ಸಂಸ್ಕಾರವು ನಡೆಯಿತು. ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರವಾಗಿ 1 ಕೋಟಿ ರು. ನೀಡಬೇಕು ಮತ್ತು ಮೃತರ ಕುಟುಂಬದ ಸದಸ್ಯರಿಗೆ ಖಾಯಂ ಉದ್ಯೋಗ ಹಾಗೂ ಟ್ರಸ್ಟ್ ನಲ್ಲಿ ಉದ್ಯೋಗ ನೀಡಬೇಕು, ಕಳೆದ ಹಲವು ವರ್ಷಗಳಿಂದ ಬಾಕಿ ಇದ್ದ, ಇಎಸ್‌ಐನಿಂದ ವಂಚಿತರಾದ ಕಾರ್ಮಿಕರಿಗೆ ಆರೋಗ್ಯ ವಿಮೆ ನೀಡಬೇಕೆಂದು ಆಗ್ರಹಿಸಲಾಯಿತು. ಎಂ ಆರ್ ಪಿ ಎಲ್ ಸಂಸ್ಥೆಯ ಸಂಸ್ಥೆಯ ಉನ್ನತ ಅಧಿಕಾರಿಗಳ ಜೊತೆ ನಡೆದ ಎಂಇಯು ಮತ್ತು ಕರ್ಮಚಾರಿ ಸಂಘದ ಸಭೆಯಲ್ಲಿ ಎಲ್ಲ ಬೇಡಿಕೆಗಳಿಗೆ ಮಾನ್ಯತೆ ದೊರೆತಿದೆ. ಮನೀಶ್ ಕರ್ಕಡ ರ ಕುಟುಂಬಕ್ಕೆ 1 ಕೋಟಿ 20 ಲಕ್ಷ ರು. ಪರಿಹಾರ, ಕುಟುಂಬದ ಸದಸ್ಯರಿಗೆ ಎಂ ಆರ್ ಪಿ ಎಲ್ ಜನಸೇವಾ ಟ್ರಸ್ಟ್ ನಲ್ಲಿ ಖಾಯಂ ಉದ್ಯೋಗ ನೀಡುವುದಾಗಿ ಲಿಖಿತ ರೂಪದಲ್ಲಿ ದಾಖಲೆ ನೀಡಿರುತ್ತಾರೆ. ಎಂಆರ್‌ಪಿಎಲ್ ನಲ್ಲಿ ದುಡಿಯುತ್ತಿರುವ ಇ ಎಸ್ ಐ ವಂಚಿತ ಕಾರ್ಮಿಕರಿಗೆ ಮುಂದಿನ 4 ವಾರಗಳಲ್ಲಿ ಸುಮಾರು 5 ಲಕ್ಷದ ಮೆಡಿಕ್ಲೈಮ್ ಪಾಲಿಸಿ ನೀಡುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿರುತ್ತಾರೆ.