ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್ ಶಿವಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಮೂರ್ತಿ ಆಯ್ಕೆಯಾದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಖಜಾಂಚಿಯಾಗಿ ಎನ್.ನಾಗೇಶ್, ಉಪಾಧ್ಯಕ್ಷರಾಗಿ ಬಸವರಾಜ್ ಹೆಗಡೆ, ಮಂಜುಳಾ ಕಿರುಗಾವಲು, ಕಾರ್ಯದರ್ಶಿಯಾಗಿ ಶಿವಕುಮಾರ್, ಎಲ್.ಸಿದ್ದರಾಜು ಅವರನ್ನು ಆಯ್ಕೆ ಮಾಡಲಾಯಿತು.ನಿರ್ಗಮಿತ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಎ.ಎಲ್ ಶಿವಶಂಕರ್, ಸಂಘದ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಕೆರಗೋಡು, ಕೆ.ಸಿ ಮಂಜುನಾಥ್, ಬಿ.ಪಿ ಪ್ರಕಾಶ್, ಕೃಷ್ಣ ಸ್ವರ್ಣಸಂದ್ರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್, ಸಂಪಾದಕರಾದ ಕೆ. ಎನ್.ಪುಟ್ಟಲಿಂಗೇಗೌಡ, ಜಿ. ಚೆನ್ನಯ್ಯ, ಪಿ.ವೆಂಕಟರಾಮಯ್ಯ, ಈ.ಶಿವಸ್ವಾಮಿ, ಎ.ಎಲ್.ಶೇಖರ್, ಸುಮಾ ಪುರುಷೋತ್ತಮ್, ನವೀನ್ ಬಸವೇಗೌಡ, ಅಶೋಕ್, ಮದನ್‌ಗೌಡ, ಚಂದ್ರೇಗೌಡ ಸೇರಿದಂತೆ ಇತರರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಎಸ್ಸಿ/ಎಸ್ಟಿ, ಒಬಿಸಿ ಮತ್ತು ವಿಶೇಷಚೇತನ ವಿದ್ಯಾರ್ಥಿಗಳಿಗೆ ಜು.7ರಂದು ಪ್ರತಿಭಾ ಪುರಸ್ಕಾರಮಂಡ್ಯ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಎಸ್ಸಿ/ಎಸ್ಟಿ, ಒಬಿಸಿ ಮತ್ತು ವಿಶೇಷಚೇತನ ವಿದ್ಯಾರ್ಥಿಗಳಿಗೆ ನಗರದಲ್ಲಿ ಜು.7ರಂದು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ ಸಂಘಟನೆ ಅಧ್ಯಕ್ಷ ಎಚ್.ಜಿ.ಗಂಗರಾಜು ತಿಳಿಸಿದರು.ಸುದ್ಧಿಗಾರೊರಂದಿಗೆ ಮಾತನಾಡಿದ ಅವರು, ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಉದ್ಘಾಟಿಸುವರು. ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ ಸಾನಿಧ್ಯ ವಹಿಸುವರು ಎಂದರು.
ಸಮಾರಂಭದಲ್ಲಿ 100 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು. ಇದೇ ವೇಳೆ ಮಂಡ್ಯದ ಮಹಿಳಾ ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರೊ.ಭರತ್‌ರಾಜ್ ಮುಖ್ಯ ಭಾಷಣ ಮಾಡುವರು. ಗಾಮನಹಳ್ಳಿ ಸ್ವಾಮಿ ಮತ್ತು ತಂಡ ಗೀತಗಾಯನ ಪ್ರಸ್ತುತಪಡಿಸುವರು ಎಂದು ತಿಳಿಸಿದರು.ಅಪರ ಜಿಲ್ಲಾಕಾರಿ ಡಾ. ಎಚ್.ಎಲ್.ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮುರ್ತಿ, ಡಿಡಿಪಿಐ ಎಚ್.ಶಿವರಾಮೇಗೌಡ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಗತಿಪರ ಚಿಂತಕ ಸಂಪತ್‌ಕುಮಾರ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ಭಾಗವಹಿಸುವರು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪದಾಧಿಕಾರಿಗಾಳಾದ ಮುತ್ತುರಾಜು, ಎಂ.ನಿಂಗಯ್ಯ, ಚಿಕ್ಕಮಂಡ್ಯ ವೇಣುಗೋಪಾಲ್, ಎಂ.ಬಿ.ರಮೇಶ್, ಮಹದೇವು ಇದ್ದರು.