ಪ್ರತಿನಿತ್ಯ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ೮೦೦ರಿಂದ ೯೦೦ ಮಂದಿ ತಪಾಸಣೆಗೆ ಬರುತ್ತಿದ್ದಾರೆ. ಈ ಪೈಕಿ ಕೆಲವರಿಗೆ ಆಯುರ್ವೇದ ಯುನಾನಿ ಚಿಕಿತ್ಸೆಯ ಬಗ್ಗೆ ಒಲವಿದೆ. ಶ್ರೀ ರಾಮ ಬಡಾವಣೆಯ ಆಯುರ್ವೇದ ಚಿಕಿತ್ಸಾಲಯ ಪಟ್ಟಣದಿಂದ ಹೊರ ಭಾಗದಲ್ಲಿದ್ದು, ಸರ್ಕಾರಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಚಿಕಿತ್ಸೆಗಳು ದೊರೆಯುವಂತೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಯುರ್ವೇದ ಅಧಿಕಾರಿಗಳ ಸಂಗಡ ಚರ್ಚಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರ್ಕಾರಿ ಯುನಾನಿ ಹಾಗೂ ಆಯುರ್ವೇದ, ಒಪಿಡಿ ಚಿಕಿತ್ಸೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೂ ದೊರೆಯುವಂತೆ ಮಾಡಬೇಕು ಎಂಬ ಒತ್ತಾಸೆಯನ್ನು ಶಾಸಕ ಸಿ. ಎನ್. ಬಾಲಕೃಷ್ಣ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಸರ್ಕಾರಿ ಯುನಾನಿ ಹಾಗೂ ಆಯುರ್ವೇದ ಸಂಯುಕ್ತ ಚಿಕಿತ್ಸಾಲಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಎಂಎಸ್‌ಡಿ ವಯೋಮಿತ್ರ ಕಾರ್ಯಕ್ರಮದ ಅಡಿಯಲ್ಲಿ ನಡೆದ ಮಾಸಿಕ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪ್ರತಿನಿತ್ಯ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ೮೦೦ರಿಂದ ೯೦೦ ಮಂದಿ ತಪಾಸಣೆಗೆ ಬರುತ್ತಿದ್ದಾರೆ. ಈ ಪೈಕಿ ಕೆಲವರಿಗೆ ಆಯುರ್ವೇದ ಯುನಾನಿ ಚಿಕಿತ್ಸೆಯ ಬಗ್ಗೆ ಒಲವಿದೆ. ಶ್ರೀ ರಾಮ ಬಡಾವಣೆಯ ಆಯುರ್ವೇದ ಚಿಕಿತ್ಸಾಲಯ ಪಟ್ಟಣದಿಂದ ಹೊರ ಭಾಗದಲ್ಲಿದ್ದು, ಸರ್ಕಾರಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಚಿಕಿತ್ಸೆಗಳು ದೊರೆಯುವಂತೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಯುರ್ವೇದ ಅಧಿಕಾರಿಗಳ ಸಂಗಡ ಚರ್ಚಿಸುವುದಾಗಿ ತಿಳಿಸಿದರು.

ಆಹಾರ ಪದ್ಧತಿಯಲ್ಲಿ ರಾಸಾಯನಿಕ ಪದಾರ್ಥಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಕೆಡುವಂಥಾಗಿದೆ. ಕಿಡ್ನಿ, ಹೃದಯ, ನೇತ್ರ, ಶ್ವಾಸಕೋಶ, ಬಿಪಿ, ಶುಗರ್‌ ಹೆಚ್ಚಾಗಿ ಕಾಡುತ್ತಿದೆ. ಆಯುರ್ವೇದದಲ್ಲಿ ಪ್ರಕೃತಿಯ ಚಿಕಿತ್ಸೆ ಪ್ರಕೃತಿಯಿಂದ ತಯಾರಾದ ಔಷಧಿಗಳು, ಲಭ್ಯವಿದ್ದು ಆ ಮೂಲಕ ಆಯುರ್ವೇದ ಚಿಕಿತ್ಸೆಗೆ ಮುಂದಾಗಬೇಕು, ಉತ್ತಮ ಆಹಾರ ಸೇವನೆ ಪೌಷ್ಟಿಕ ಆಹಾರ ಸೇವನೆ. ಸುಖನಿದ್ರೆ, ವ್ಯಾಯಾಮ, ಯೋಗ, ಧ್ಯಾನದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಅಂಗೈಯಲ್ಲಿ ನಮ್ಮ ಆರೋಗ್ಯವಿರಲಿ ಎಂದು ಸಲಹೆ ನೀಡಿದರು. ಆಯುರ್ವೇದ ಯುನಾನಿ ಆರೋಗ್ಯ ಶಿಬಿರ ಉದ್ಘಾಟನೆ ಮಾಡಿದ ಅವರು, ರೋಗಿಗಳಿಗೆ ಔಷಧಿ ವಿತರಿಸಿ. ಚಿಕಿತ್ಸಾಲಯ ವೀಕ್ಷಣೆ ಮಾಡಿದರು.

ಆಯುರ್ವೇದ ತಜ್ಞ ವೈದ್ಯ ಡಾ.ತ್ರಿವೇಣಿ ಅವರು ಪ್ರಾಸ್ತಾವಿಕ ಮಾತನಾಡಿ, ಆಯುರ್ವೇದ ಯುನಾನಿ ಚಿಕಿತ್ಸೆ ಪ್ರಚಲಿತವಾಗಿದ್ದು ವಿಶೇಷ ಗುಣವನ್ನು ಔಷಧಿಗಳು ಹೊಂದಿದೆ. ಸ್ನಾಯು, ವಾತ, ವ್ಯಾದಿ, ಜರ ವಯೋಸಹಜ, ವೃಕ್ಷಾ ಆಹಾರ ಅತೀ ವ್ಯಾಯಾಮದಿಂದ ಬರುವ, ನೋವು ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆ ಫಲಕಾರಿಯಾಗಿದೆ. ಆಯುರ್ವೇದದ ಕಟಿಬಸ್ತಿ, ಪಂಚಕರ್ಮ ಚಿಕಿತ್ಸೆಗಳು ಚಿಕಿತ್ಸಾಲಯದಲ್ಲಿ ಲಭ್ಯವಿದೆ ಎಂದರು. ಆಯುರ್ವೇದ ವೈಜ್ಞಾನಿಕಾರಿಗಳಾದ ಡಾ. ಪವನ್, ಡಾ ಪುಟ್ಟಸ್ವಾಮಿ, ಡಾ. ರವಿರಾಜ್, ಯುನಾನಿ ತಜ್ಞವೈಗೆ ಡಾ. ಬಶೀರ ಇತರರು ಉಪಸ್ಥಿತರಿದ್ದರು.