ಸಾರಾಂಶ
ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರದಿಂದ ಶುರುವಾದ ಮಳೆಯ ಆರ್ಭಟ ಬುಧವಾರದವೂ ಮುಂದುವರಿದಿದ್ದು ಮಳೆರಾಯನ ಆರ್ಭಟಕ್ಕೆ ತೇವಾಂಶ ಹೆಚ್ಚಾಗಿ ಮಣ್ಣಿನ ಮನೆಗಳು ಕುಸಿಯತೊಡಗಿವೆ. ಸೋರುತ್ತಿರುವ ಮನೆಗಳನ್ನು ರಕ್ಷಿಸಿಕೊಳ್ಳಲು ಜನರು ತಾಡಪತ್ರೆ ಮೊರೆಹೋಗುತ್ತಿದ್ದಾರೆ.
ಕುಷ್ಟಗಿ:ಸರಿಯದ ಕಾರ್ಮೋಡ, ಸೂರ್ಯನ ದರ್ಶನವಿಲ್ಲ, ಬದುಕು ಅಸ್ತವ್ಯಸ್ತ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದ್ದು, ಜನರು ತೀವ್ರ ಸಂಕಷ್ಟ ಎದುರಿಸುವಂತೆ ಮಾಡಿದೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರದಿಂದ ಶುರುವಾದ ಮಳೆಯ ಆರ್ಭಟ ಬುಧವಾರದವೂ ಮುಂದುವರಿದಿದ್ದು ಮಳೆರಾಯನ ಆರ್ಭಟಕ್ಕೆ ತೇವಾಂಶ ಹೆಚ್ಚಾಗಿ ಮಣ್ಣಿನ ಮನೆಗಳು ಕುಸಿಯತೊಡಗಿವೆ. ಸೋರುತ್ತಿರುವ ಮನೆಗಳನ್ನು ರಕ್ಷಿಸಿಕೊಳ್ಳಲು ಜನರು ತಾಡಪತ್ರೆ ಮೊರೆಹೋಗುತ್ತಿದ್ದಾರೆ. ಆದರೂ ಸಹ ತಂಪು ಹೆಚ್ಚಾಗಿ ಮನೆಗಳು ಸೋರುತ್ತಿವೆ. ಕಳೆದೆರಡು ದಿನದಲ್ಲಿ ತಾಲೂಕಿನ ಕಳಮಳ್ಳಿ, ಬಿಸನಾಳ, ನವಲಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮತ್ತೊಂದೆಡೆ ಮಳೆ ಬಿಡುವು ನೀಡದೆ ಇರುವುದರಿಂದ ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲದೆ ತೊಂದರೆ ಪಡುವಂತಾಗಿದೆ.ಹದಗೆಟ್ಟಿರುವ ರಸ್ತೆ:ಮಳೆಯಿಂದ ಮಣ್ಣಿನ ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿದ್ದು ಸಂಚಾರಕ್ಕೆ ಸಂಚಕಾರ ತಂದಿವೆ. ಜಮೀನಿಗೆ ಹೋಗುವ ರಸ್ತೆಗಳ ಕಥೆಯಂತು ಹೇಳತೀರದಾಗಿದೆ. ಮಳೆ ನಿಂತ ನಂತರ ಇಲಾಖೆ ಅಧಿಕಾರಿಗಳು ರಸ್ತೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.ಅಧಿಕಾರಿಗಳ ಭೇಟಿ:ಮಳೆಯಿಂದ ಕುಸಿದ ಮನೆಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಹಾನಿಯಾದ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕಳಮಳ್ಳಿ, ಬಿಸನಳ್ಳಿ, ನವಲಳ್ಳಿ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದು ಈ ಕುರಿತು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಕಳಿಸಿ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು.ಅಶೋಕ ಶಿಗ್ಗಾಂವಿ ತಹಸೀಲ್ದಾರ್ ಕುಷ್ಟಗಿ