ಹೊಳೆನರಸೀಪುರದ ಪೆಂಡಾಲ್‌ ಗಣೇಶೋತ್ಸವಕ್ಕೆ ಮಣ್ಣು ಪೂಜೆ

| Published : Jul 28 2025, 12:30 AM IST

ಸಾರಾಂಶ

ಹೊಳೆನರಸೀಪುರ ೬೮ನೇ ವರ್ಷದ ಗಣೇಶೋತ್ಸವ ನಿರ್ವಿಘ್ನವಾಗಿ ಎಲ್ಲರ ಸಹಕಾರದಲ್ಲಿ ನಡೆಯಲಿ ಎಂದು ಪ್ರಾರ್ಥಿಸಿ ಸ್ಥಂಭ ನೆಡುವ, ಶ್ರೀ ಗಣೇಶಸ್ವಾಮಿಯ ಪೀಠ ಹಾಗೂ ಮೃತ್ತಿಕೆ ಪೂಜಿಸುವ ಸಂಪ್ರದಾಯ ಆಚರಣೆಯಲ್ಲಿದ್ದು, ಶಿಲ್ಪಿಗಳಾದ ಕೆ.ಸತೀಶ್ ಹಾಗೂ ಸಮಿತಿಯ ಸದಸ್ಯರು ಇಂದಿನ ಪೂಜೆಗೆ ಅಗತ್ಯವಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು. ಹಿರಿಯ ಅರ್ಚಕರಾದ ಶ್ರೀಷಾಚಾರ್ ಮಾರ್ಗದರ್ಶನದಲ್ಲಿ ಶಶಾಂಕ್ ಪುತ್ತೂರಾಯ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದಲ್ಲಿ ಕಳೆದ 67 ವರ್ಷಗಳಿಂದ ವೈಭವದಿಂದ ಜರಗುತ್ತಿರುವ ಗಣೇಶೋತ್ಸವ ಆಚರಣೆಗೆ ಮಹಾಗಣಪತಿ ಪೆಂಡಾಲ್ ಆವರಣದಲ್ಲಿ ಸ್ಥಂಭ ಮಹೂರ್ತ ಹಾಗೂ ಮೃತ್ತಿಕೆ(ಮಣ್ಣು) ಪೂಜೆಯು ಆಚರಣೆಯಂತೆ ನಡೆಯಿತು.

೬೮ನೇ ವರ್ಷದ ಗಣೇಶೋತ್ಸವ ನಿರ್ವಿಘ್ನವಾಗಿ ಎಲ್ಲರ ಸಹಕಾರದಲ್ಲಿ ನಡೆಯಲಿ ಎಂದು ಪ್ರಾರ್ಥಿಸಿ ಸ್ಥಂಭ ನೆಡುವ, ಶ್ರೀ ಗಣೇಶಸ್ವಾಮಿಯ ಪೀಠ ಹಾಗೂ ಮೃತ್ತಿಕೆ ಪೂಜಿಸುವ ಸಂಪ್ರದಾಯ ಆಚರಣೆಯಲ್ಲಿದ್ದು, ಶಿಲ್ಪಿಗಳಾದ ಕೆ.ಸತೀಶ್ ಹಾಗೂ ಸಮಿತಿಯ ಸದಸ್ಯರು ಇಂದಿನ ಪೂಜೆಗೆ ಅಗತ್ಯವಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು. ಹಿರಿಯ ಅರ್ಚಕರಾದ ಶ್ರೀಷಾಚಾರ್ ಮಾರ್ಗದರ್ಶನದಲ್ಲಿ ಶಶಾಂಕ್ ಪುತ್ತೂರಾಯ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶಿಲ್ಪಿಗಳಾದ ಕೆ. ಸತೀಶ್ ಮಾತನಾಡಿ, ನಮ್ಮ ತಂದೆ ದಿ. ಎಂ.ಬಿ.ಕಾಳಾಚಾರ್ ಅವರು ೬೮ ವರ್ಷಗಳಿಂದ ಶ್ರೀ ಗಣೇಶೋತ್ಸವ ಆಚರಣೆಗೆ ಶ್ರೀ ಗಣೇಶಸ್ವಾಮಿಯ ಮೂರ್ತಿ ನಿರ್ಮಿಸಿ ಕೊಡುತ್ತಿದ್ದರು. ಅವರ ಜತೆಗೆ ಮೂರ್ತಿ ನಿರ್ಮಾಣದಲ್ಲಿ ಸಹಕಾರ ನೀಡುತ್ತಾ ಅವರ ಮಾರ್ಗದರ್ಶನದಲ್ಲಿ ಕಳೆದ ೫೧ ವರ್ಷಗಳಿಂದ ಶ್ರೀ ಗಣೇಶಸ್ವಾಮಿಯ ಮೂರ್ತಿ ನಿರ್ಮಿಸುತ್ತಿದ್ದೇನೆ ಎಂದರು.ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಪುರಸಭಾ ಸದಸ್ಯ ಕೆ.ಶ್ರೀಧರ್, ಸಮಿತಿಯ ಎಸ್.ಗೋಕುಲ್, ವೈ.ವಿ.ಚಂದ್ರೇಶೇಖರ್, ಎಚ್.ವಿ.ಸುರೇಶ್ ಕುಮಾರ್, ಮುರಳಿಧರ ಗುಪ್ತ, ಶಂಕರನಾರಾಯಣ ಐತಾಳ್, ಲೋಕೇಶ್, ನರಸಿಂಹಶೆಟ್ಟಿ, ಮಹೇಶ್, ಚನ್ನೇಗೌಡ, ಇತರರು ಭಾಗವಹಿಸಿದ್ದರು.