ಮುಡಾ ಪ್ರಕರಣ: ಹೈಕೋರ್ಟ್‌ ಹೇಳಿದ್ದೇನು?

| Published : Sep 25 2024, 12:49 AM IST

ಸಾರಾಂಶ

ನಿಗದಿತ ಅರ್ಹತೆ ಇಲ್ಲದಿದ್ದರೂ ಸಿಎಂ ಪತ್ನಿ 56 ಕೋಟಿ ರು. ಮೌಲ್ಯದ 14 ನಿವೇಶನ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣ ಬಿಟ್ಟು ಮತ್ಯಾವ ಪ್ರಕರಣ ತನಿಖೆ ನಡೆಸಬಹುದು?

- ನಿಗದಿತ ಅರ್ಹತೆ ಇಲ್ಲದಿದ್ದರೂ ಸಿಎಂ ಪತ್ನಿ 56 ಕೋಟಿ ರು. ಮೌಲ್ಯದ 14 ನಿವೇಶನ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣ ಬಿಟ್ಟು ಮತ್ಯಾವ ಪ್ರಕರಣ ತನಿಖೆ ನಡೆಸಬಹುದು?- ಮುಡಾ ನಿಯಮಗಳ ಪ್ರಕಾರವೇ ಬಡಾವಣೆ ಅಭಿವೃದ್ಧಿಗೆ 3 ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡ ವ್ಯಕ್ತಿ 4,800 ಚದರ ಅಡಿ ವಿಸ್ತೀರ್ಣದ 40*60 ಎರಡು ನಿವೇಶನ ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಕರಣದಲ್ಲಿ 14 ನಿವೇಶನ ನೀಡಿರುವುದು ಆಘಾತ ಮೂಡಿಸಿದೆ. - ಪರ್ಯಾಯ ನಿವೇಶನವನ್ನು ಮೈಸೂರಿನ ಹೃದಯ ಭಾಗದ ವಿಜಯನಗರದಲ್ಲಿ ನೀಡಲಾಗಿದೆ. ಆದ್ದರಿಂದ ಸಿಎಂ ಅನುಕೂಲಕ್ಕಾಗಿ ಹೇಗೆ ಮತ್ತು ಯಾಕೆ ನಿಯಮವನ್ನು ಸಡಿಲಿಸಲಾಯಿತು ಎಂಬ ಬಗ್ಗೆ ತನಿಖೆ ನಡೆವ ಅಗತ್ಯವಿದೆ - ಮೇಲ್ನೋಟಕ್ಕೆ ದೂರುದಾರರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವುದು, ಪ್ರಭಾವ ಬಳಸಿರುವುದು ಕಂಡು ಬರುತ್ತದೆ. ಪ್ರಭಾವ ಬೀರುವುದಕ್ಕೆ ಯಾವುದೇ ಶಿಫಾರಸು ಮಾಡುವ ಅಥವಾ ಆದೇಶ ಹೊರಡಿಸುವ ಅಗತ್ಯವಿಲ್ಲ.- ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದ ಬಳಿಕ 50:50 ಅನುಪಾತದಲ್ಲಿ ಪರಿಹಾರ ಭೂಮಿ ನೀಡುವ ನಿರ್ಣಯವನ್ನು ಮುಡಾ ಹಿಂತೆಗೆದುಕೊಂಡಿತ್ತು. ಆ ಸಭೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ನಿವೇಶನ ಹಂಚಿಕೆ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂಬ ವಾದ ನಿಜಕ್ಕೂ ಹಾಸ್ಯಾಸ್ಪದ.- ರಾಜ್ಯಪಾಲರು ಕೈಗೊಂಡಿರುವ ಸ್ವತಂತ್ರ ನಿರ್ಧಾರದಲ್ಲಿ ಯಾವುದೇ ಲೋಪ ಕಂಡುಬರುತ್ತಿಲ್ಲ. ರಾಜ್ಯಪಾಲರು ಸಂಪೂರ್ಣ ವಿವೇಚನೆಯುತವಾಗಿ ಆದೇಶ ಹೊರಡಿಸಿದ್ದಾರೆ- ರಾಜ್ಯಪಾಲರು ಸಾಮಾನ್ಯ ಸಂದರ್ಭದಲ್ಲಿ ಸಚಿವ ಸಂಪುಟದ ಸಲಹೆ ಹಾಗೂ ಸಲಹೆ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ, ಅಸಾಧಾರಣ ಸಂದರ್ಭದಲ್ಲಿ ರಾಜ್ಯಪಾಲರು ಸ್ವತಂತ್ರ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಾಲಿ ಪ್ರಕರಣವು ಅಂತಹ ಅಸಾಧಾರಣ ಸಂದರ್ಭದ್ದಾಗಿದೆ