ಸಾರಾಂಶ
Mudagal appeals to use mandatory helmet
ಮುದಗಲ್: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಿದ್ದು, ಈ ನಿಟಿನಲ್ಲಿ ಸಾರ್ವಜನಿಕರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡಿ ಸಂಚಾರ ಮಾಡುವಂತೆ ಮುದಗಲ್ ಠಾಣೆಯ ಪಿಎಸ್ಐ ವೆಂಕಟೇಶ ಮಾಡಗೇರಿ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ನ.1ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಮುದಗಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ಕಿವಿ ಮಾತು ಹೇಳಿದರು. ಒಂದು ವೇಳೆ ಹೆಲ್ಮೆಟ್ ಬಳಕೆ ಮಾಡದಿರುವ ಬೈಕ್ ಸವಾರರಿಗೆ 500 ರು. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಹೆಚ್ಚುತ್ತಿರುವ ಅಪಘಾತ ವನ್ನು ನಿಯಂತ್ರಿಸಲು ಘನ ನ್ಯಾಯಾಲಯವು ಈ ಆದೇಶ ಜಾರಿಗೊಳಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇಲಾಖೆ ಹೆಚ್ಚುವರಿ ಅಧಿಕಾರಿಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳ ಮೂಲಕ ಕಡ್ಡಾಯ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಿದ್ದು ಸಾರ್ವಜನಿಕರು ಕೂಡ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುವಂತೆ ಮನವಿ ಮಾಡಿದ್ದಾರೆ.
--------03ಎಂಡಿಎಲ್01: ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ.