ಅಗ್ರಹಾರ ಬೆಳಗುಲಿ ಸೊಸೈಟಿ ಅಧ್ಯಕ್ಷರಾಗಿ ಮೂಡಲಗಿರಿ ಗೌಡ

| Published : Apr 10 2025, 01:04 AM IST

ಸಾರಾಂಶ

ಮೂಡಲಗಿರಿ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅಶೋಕ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಲೀಲಾ ಘೋಷಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೂವಿನಹಳ್ಳಿ ಮೂಡಲಗಿರಿಗೌಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಬ್ಯಾಂಕ್‍ನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣ ಅವರ ಸಲಹೆ ಸಹಕಾರ ಪಡೆದು ಹೆಚ್ಚಿನ ಪ್ರಮಾಣದಲ್ಲಿ ಶೇರುದಾರ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಅಗ್ರಹಾರ ಬೆಳಗುಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಹೂವಿನಹಳ್ಳಿ ಮೂಡಲಗಿರಿ ಗೌಡ, ಉಪಾಧ್ಯಕ್ಷರಾಗಿ ಗೌರಮ್ಮ ಅಶೋಕ್ ಅವಿರೋಧವಾಗಿ ಆಯ್ಕೆಗೊಂಡರು.ಮೂಡಲಗಿರಿ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅಶೋಕ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಲೀಲಾ ಘೋಷಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹೂವಿನಹಳ್ಳಿ ಮೂಡಲಗಿರಿಗೌಡ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಬ್ಯಾಂಕ್‍ನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣ ಅವರ ಸಲಹೆ ಸಹಕಾರ ಪಡೆದು ಹೆಚ್ಚಿನ ಪ್ರಮಾಣದಲ್ಲಿ ಶೇರುದಾರ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್ ಎಂ ನಟರಾಜ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷರಾದ ಜಯಲಿಂಗೇಗೌಡ, ಗಂಜಿಗೆರೆ ಕೆಂಪೇಗೌಡ, ನೇರಲಕೆರೆ ಪ್ರಭು, ವಿರೂಪಾಕ್ಷಪುರ ಚಂದ್ರಣ್ಣ, ನಿರ್ದೇಶಕರಾದ ಪ್ರಶಾಂತ್ ಕುಮಾರ್, ಬೀರೇಗೌಡ, ಮೂಡಲಗಿರಿ ಗೌಡ, ರಮೇಶ್, ಬಿಸಿ ರವೀಶ್, ಶಿವಮ್ಮ, ನಾಗರತ್ನ ಜಿಜೆ, ಗೋಪಾಲ್, ಕಾಂತಾಮಣಿ, ಚರಣ್ ರಾಜ್, ಕರ್ನಾಟಕ ದಲಿತ ಸಂಘಟನೆ ಜಿಲ್ಲಾಧ್ಯಕ್ಷ ಪ್ರಕಾಶ್, ಡಿಎಸ್ಎಸ್ ಮುಖಂಡ ಶಿವಯ್ಯ, ರಘು, ಮುಖಂಡರಾದ ಕುಳ್ಳೇಗೌಡ, ದುಗ್ಗೇನಹಳ್ಳಿ ವೀರೇಶ್, ಹುಲ್ಲೇನಹಳ್ಳಿ ನಾರಾಯಣ್, ನರೇನಹಳ್ಳಿ ಶೇಖರಣ್ಣ, ಇಂದ್ರಜಿತ್, ಶ್ರೀನಿವಾಸ್, ಡೇರಿ ಮಂಜು, ಮಂಜುಳಾ ಗೋಪಾಲ್, ಗ್ರಾಪಂ ಸದಸ್ಯ ಧರ್ಮರಾಜ್, ಸಂತೋಷ್, ಕೃಷಿ ಪತ್ತಿನ ಸವಿತಾ ಕುಮಾರ್, ಕಾರ್ಯದರ್ಶಿ ರುದ್ರೇಶ್, ಸಿಬ್ಬಂದಿಯಾದ ಕೀರ್ತಿ ಕುಮಾರ್, ಜ್ಯೋತಿ ಸೇರಿದಂತೆ ಇತರರು ಹಾಜರಿದ್ದರು.