ಕಾಂತಾವರ: ಇಂದು ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ

| Published : Mar 24 2024, 01:33 AM IST

ಕಾಂತಾವರ: ಇಂದು ಮುದ್ದಣ ಸಾಹಿತ್ಯೋತ್ಸವ, ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹರೀಶ್ ಕೆ. ಅದೂರು ನಿರ್ದೇಶನದ ಕಾಂತಾವರ ಕನ್ನಡ ಸಂಘ ಕುರಿತ ‘ನುಡಿತೇರು’ ಸಾಕ್ಷ್ಯಚಿತ್ರವನ್ನು ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ.

ಮೂಡುಬಿದಿರೆ: ಕನ್ನಡ ಸಂಘ ಕಾಂತಾವರ ಇದರ ವತಿಯಿಂದ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ಮುದ್ದಣ ಸಾಹಿತ್ಯೋತ್ಸವ -೨೦೨೪ ಹಾಗೂ ೪೪ನೇ ವರ್ಷದ ಮುದ್ದಣಕಾವ್ಯ ಪ್ರಶಸ್ತಿ ಪ್ರದಾನ ಮಾ.24ರಂದು ಭಾನುವಾರ ನಡೆಯಲಿದೆ.

ಕರ್ನಾಟಕ ಸಂಘ, ಶಿವಮೊಗ್ಗ ಇದರ ಅಧ್ಯಕ್ಷ ಎಂ.ಎನ್. ಸುಂದರ ರಾಜ್ ಮುದ್ದಣ ಸಾಹಿತ್ಯೋತ್ಸವ ಉದ್ಘಾಟಿಸಲಿದ್ದಾರೆ. ನಿಕಟಪೂರ್ವ ಕ.ಸಾ.ಪ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಲಕ್ಷ್ಮಣ ವಿ.ಎ. ಬೆಂಗಳೂರು ( ಮುದ್ದಣ ಕಾವ್ಯ ಪ್ರಶಸ್ತಿ), ಮುನಿರಾಜ ರೆಂಜಾಳ (ಗಮಕಕಲಾ ಪ್ರವಚನ ಪ್ರಶಸ್ತಿ) ಹಾಗೂ ಗಮಕಿ ಸುರೇಶ್ ರಾವ್ ಅತ್ತೂರು (ಗಮಕಕಲಾ ವಾಚನ ಪ್ರಶಸ್ತಿ), ಲೋಹ ಶಿಲ್ಪಿ ಪ್ರಕಾಶ್ ಆಚಾರ್ಯ (ಶಿಲ್ಪಕಲಾ ಪ್ರಶಸ್ತಿ ) ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಳ್ವಾಸ್ ಪದವಿಪೂರ್ವ ಕಾಲೇಜು ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ನೂತನ ಹೊತ್ತಗೆಗಳ ಬಿಡುಗಡೆ ಮಾಡಲಿದ್ದಾರೆ.

ನುಡಿತೇರು ಲೋಕಾರ್ಪಣೆ: ಪತ್ರಕರ್ತ ಹರೀಶ್ ಕೆ. ಅದೂರು ನಿರ್ದೇಶನದ ಕಾಂತಾವರ ಕನ್ನಡ ಸಂಘ ಕುರಿತ ‘ನುಡಿತೇರು’ ಸಾಕ್ಷ್ಯಚಿತ್ರವನ್ನು ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ ರನ್ನನ ಗದಾಯುದ್ಧದ ದುರ್ಯೋಧನ ವಿಲಾಪ ಗಮಕ ವಾಚನ ವ್ಯಾಖ್ಯಾನವನ್ನು ಗಮಕಿ ಸುರೇಶ್ ರಾವ್ ಆತ್ತೂರು (ವಾಚನ) ಹಾಗೂ ಶಿವಕುಮಾ‌ರ್ ಆಳಗೋಡು (ವ್ಯಾಖ್ಯಾನ) ನಡೆಸಿಕೊಡಲಿದ್ದಾರೆ.