ಸಾರಾಂಶ
ಚೌರೀರ ತಂಡದ ಪರ ಪ್ರತಾಪ್ ಅಚ್ಚಯ್ಯ ಹ್ಯಾಟ್ರೀಕ್ ಗೋಲು
ಕನ್ನಡಪ್ರಭ ವಾರ್ತೆ ಮಡಿಕೇರಿನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರ ನಡೆದ ಪಂದ್ಯದಲ್ಲಿ ಚೌರೀರ, ಚೆರಿಯಪಂಡ, ಮೂಕಳಮಾಡ, ಪಾಲಂದಿರ ತಂಡಗಳು ಜಯ ಗಳಿಸಿತು.
ಮುಕ್ಕಾಟಿರ (ಬೇತ್ರಿ) ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಚೌರೀರ ತಂಡ ಜಯ ಸಾಧಿಸಿತು. ಚೌರೀರ ತಂಡದ ಪರ ಪ್ರತಾಪ್ ಅಚ್ಚಯ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೆಮ್ಮಯ್ಯ 1 ಗೋಲು ಬಾರಿಸಿದರು. ಮುಕ್ಕಾಟಿರ ಉತ್ತಮ್ ಬೋಪಣ್ಣ 1 ಗೋಲು ದಾಖಲಿಸಿದರು.ಶಿವಾಚಾಳಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸುವ ಮೂಲಕ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಚೆರಿಯಪಂಡ ತಂಡ 3 ಗೋಲು ದಾಖಲಿಸಿ ಗೆಲುವಿನ ನಗೆ ಬೀರಿತು.
ಮೂಕಳಮಾಡ ಮತ್ತು ಅಜ್ಜಿಕುಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳಮಾಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಾಲಂದಿರ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪಾಲಂದಿರ ತಂಡ ಜಯ ಸಾಧಿಸಿತು.ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮಚ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 2 ಗೋಲು ದಾಖಲಿಸಿ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಮಚ್ಚಂಡ ತಂಡ 4 ಗೋಲು ಬಾರಿಸಿ ಗೆಲುವು ದಾಖಲಿಸಿತು.
ಮಲ್ಲಂಗಡ ಮತ್ತು ಸಿದ್ದಂಡ ನಡುವಿನ ಪಂದ್ಯವನ್ನು ಮಳೆಯ ಕಾರಣದಿಂದ ಮುಂದೂಡಲಾಯಿತು. ನಾಳಿಯಂಡ ಮತ್ತು ಕೊಕ್ಕಲೆರ ವಾಕ್ ಓವರ್‌ನಲ್ಲಿ ನಾಳಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತಾತಂಡ ಮತ್ತು ಕುಯಿಮಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ತಾತಂಡ ತಂಡ ಗೆಲುವು ಸಾಧಿಸಿತು.ಕೊಕ್ಕಲೆಮಾಡ ಮತ್ತು ಕಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೆಯಂಡ ತಂಡ ಗೆಲುವು ಸಾಧಿಸಿತು. ನಾಯಕಂಡ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ ಕಳ್ಳಿಚಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು.
ನಡಿಕೇರಿಯಂಡ ಮತ್ತು ಪಂದ್ಯಂಡ ತಂಡಗಳ ನಡುವಿನ ವಕ್ ಓವರ್‌ನಲ್ಲಿ ನಡಿಕೇರಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.ಕಾಳಿಮಾಡ ಮತ್ತು ನಂಬುಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೊಟ್ಟುಕತ್ತಿರ ಮತ್ತು ಕಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗಧಿತ ಅವದಿಯಲ್ಲಿ ಶೂನ್ಯ ಸಾಧನೆ ಮಾಡಿದ ಕಾರಣ ಟೈಬ್ರೇಕರ್‌ನಲ್ಲಿ 5 ಗೋಲು ದಾಖಲಿಸಿದ ಕಳಕಂಡ ತಂಡ ಜಯ ದಾಖಲಿಸಿತು.ತಿರೋಡಿರ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ತಿರುಟೆರ ಗೆಲುವು ಸಾಧಿಸಿತು. ಕೇತಿರ ಮತ್ತು ಕೊಚ್ಚೆರ ನಡುವಿನ ಪಂದ್ಯದಲ್ಲಿ ಕೊಚ್ಚೆರ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಕಳ್ಳಂಗಡ ಮತ್ತು ನಾಮೆರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಳ್ಳಂಗಡ ತಂಡ ಗೆಲುವು ದಾಖಲಿಸಿತು. ಚಟ್ಟಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ತೀತರಮಾಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.ಚೊಟ್ಟೆಯಂಡಮಾಡ ಮತ್ತು ಉಡುವೆರ ತಂಡಗಳ ನಡುವೆ ವಾಕ್ ಓವರ್‌ನಲ್ಲಿ ಚೊಟ್ಟೆಯಂಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಾರಂಡ ಮತ್ತು ಕಾಳೇಂಗಡ ತಂಡದ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೇಂಗಡ ತಂಡ ಜಯ ಸಾಧಿಸಿತು.