8ರಂದು ಮುದ್ದು ಕೃಷ್ಣ- ಮುದ್ದು ರಾಧೆ ಡಿಜಿಟಲ್ ಫೋಟೊ ಲಕ್ಕಿ ಡ್ರಾ

| Published : Sep 04 2024, 01:50 AM IST

8ರಂದು ಮುದ್ದು ಕೃಷ್ಣ- ಮುದ್ದು ರಾಧೆ ಡಿಜಿಟಲ್ ಫೋಟೊ ಲಕ್ಕಿ ಡ್ರಾ
Share this Article
  • FB
  • TW
  • Linkdin
  • Email

ಸಾರಾಂಶ

ವಿಜೇತರಿಗೆ ಪ್ರಥಮ ಬಹುಮಾನ 2 ಗ್ರಾಂ ಚಿನ್ನದ ನಾಣ್ಯ, ದ್ವೀತಿಯ ಹಾಗೂ ತೃತೀಯ ಬಹುಮಾನವಾಗಿ 1 ಗ್ರಾಂ ಚಿನ್ನದ ನಾಣ್ಯ ಮತ್ತು ಸಮಾಧಾನ ಬಹುಮಾನವಾಗಿ ಸೈಕಲ್ ವಿತರಿಸಲಾಗುವುದು

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಪುತ್ತಿಗೆ ಮಠ ಹಾಗೂ ಉಡುಪಿ ಶ್ರೀಕೃಷ್ಣ ಆಶ್ರಯದಲ್ಲಿ ಕ್ಲಿಂಕಿಂಗ್ ಗ್ಲೋಬ್ಲೆಟ್ಸ್ ಸೆಲೆಬ್ರಿಫಿ ಪ್ರೈ.ಲಿ. ಸಂಸ್ಥೆಯ ವತಿಯಿಂದ ಮುದ್ದು ಕೃಷ್ಣ - ಮುದ್ದು ರಾಧೆ ಪೋಟೋ ಡಿಜಿಟಲ್ ಲಕ್ಕಿ ಡ್ರಾ ಸೆ.8ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಈ ಬಗ್ಗೆ ಸಂಸ್ಥೆಯ ಸಂಸ್ಥಾಪಕ ನಾಗರಾಜ್ ಆಚಾರ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಹಿರಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ನೇಕಾರ ಮುಖಂಡ ರತ್ನಾಕರ್ ಇಂದ್ರಾಳಿ ಮೊದಲಾದವರು ಉಪಸ್ಥಿತರಿರುವರು.ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಸಾರ್ವಜನಿಕರು ಇಸಿ ಈವೇಂಟ್ಸ್ ಆ್ಯಪ್ ಡೌನ್ ಲೋಡ್ ಮಾಡಿ, ಮಕ್ಕಳ ಕೃಷ್ಣ ಹಾಗೂ ರಾಧೆಯ ಪೋಟೊಗಳನ್ನು ಅಪ್‌ಲೋಡ್ ಮಾಡಬೇಕು. ಸೆ.7 ಅಪ್‌ಲೋಡ್ ಮಾಡಲು ಕೊನೆಯ ದಿನವಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 2 ಗ್ರಾಂ ಚಿನ್ನದ ನಾಣ್ಯ, ದ್ವೀತಿಯ ಹಾಗೂ ತೃತೀಯ ಬಹುಮಾನವಾಗಿ 1 ಗ್ರಾಂ ಚಿನ್ನದ ನಾಣ್ಯ ಮತ್ತು ಸಮಾಧಾನ ಬಹುಮಾನವಾಗಿ ಸೈಕಲ್ ವಿತರಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ 2 ಸಾವಿರಕ್ಕೂ ಅಧಿಕ ಕೃಷ್ಣ ರಾಧೆಯರ ಪೋಟೊ ಅಪ್‌ಲೋಡ್ ಆಗಿದೆ. ಸಾರ್ವಜನಿಕ ಯಾವುದೇ ಸಂದರ್ಭದಲ್ಲಿ ತೆಗೆದ, ಹಿಂದಿನ ವರ್ಷದ ಪೋಟೋಗಳನ್ನೂ ಅಪ್‌ಲೋಡ್ ಮಾಡಬಹುದಾಗಿದೆ. ಆಯ್ಕೆ ಪ್ರಕ್ರಿಯೂ ಸಂಪೂರ್ಣ ಡಿಜಿಟಲ್ ಆ್ಯಪ್ ಮೂಲಕ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಭರತ್ ಕುಮಾರ್ ಹಾಗೂ ರಜನೀಶ್ ಉಪಸ್ಥಿತರಿದ್ದರು.