25 ರಿಂದ ಮೂಗೂರು ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೆ

| Published : Jan 14 2024, 01:32 AM IST / Updated: Jan 14 2024, 04:01 PM IST

ಸಾರಾಂಶ

ಇತಿಹಾಸ ಪ್ರಸಿದ್ಧವಾದ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ. 25 ರಿಂದ 29 ರವರೆಗೆ ನಡೆಯಲಿದ್ದು, ಭಕ್ತರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಸುರೇಶ್ ಅಚಾರ್ಯ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮೂಗೂರು

ಇತಿಹಾಸ ಪ್ರಸಿದ್ಧವಾದ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ. 25 ರಿಂದ 29 ರವರೆಗೆ ನಡೆಯಲಿದ್ದು, ಭಕ್ತರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಸುರೇಶ್ ಅಚಾರ್ಯ ಸೂಚಿಸಿದರು.

ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಆವರಣದಲ್ಲಿ ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸಮರ್ಪಕ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು, ಈ ಬಾರಿ ಅಮ್ಮನವರ ಜಾತ್ರೆಗೆ ನಿರೀಕ್ಷೆಗಿಂತ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ವೈದರು ಹಾಗೂ ಸಿಬ್ಬಂದಿ ವರ್ಗದವರು ರಾತ್ರಿ ಸಮಯದಲ್ಲಿ ವಾಸ್ತವ್ಯ ಇರಬೇಕು. 

ನಿರಂತರ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ಗ್ರಾಮ ನೈರ್ಮಲ್ಯ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲುಬೇಕು ಜಾತ್ರಾ ಕಾರ್ಯಕ್ರಮಗಳು ಸುಗಮವಾಗಿ ಸಾಗಲು ಅಧಿಕಾರಿಗಳು ಗಮನ ಕೊಡಬೇಕೆಂದು ಎಲ್ಲ ಸಿದ್ಧತೆಗಳನ್ನು ಪೂರ್ಣ ಗೊಳಿಸಿ ಅಗತ್ಯ ಕ್ರಮಗಳನ್ನು ಅನುಸರಿಸಿ ಬೇಕೆಂದು ಎಂದು ಹೇಳಿದರು.

ಐದು ದಿನಗಳು ನಡೆಯುವ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕೆಂದರು. ಗ್ರಾಮಸ್ಥರು ಮಾತನಾಡಿ, ಶ್ರೀ ದೇಶೇಶ್ವರ ಸ್ವಾಮಿ ದೇವಸ್ಥಾನದ ಗೋಪುರದಲ್ಲಿ ಬೆಳೆದಿರುವ ಗಿಡಗಳನ್ನು ಕೀಳಿಸಬೇಕೆಂದು ಎಂದು ಹೇಳಿದರು.

ಎರಡು ವರ್ಷಗಳಿಂದ ತೆಪ್ಪೋತ್ಸವ ಸ್ಥಗಿತಗೊಂಡಿದ್ದ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಿ ಉಪಯೋಗಕ್ಕೆ ಬರುತ್ತಿಲ್ಲ ಇದರ ಬಗ್ಗೆ ಗಮನಹರಿಸಿ ಎಂದು ಗ್ರಾಮಸ್ಥರು ಸಭೆಯಲ್ಲಿ ಮಾತನಾಡಿದರು.

ಹೊಸ ರಥದ ನಿರ್ಮಾಣ ಬಾಕಿ ಹಣ ಬಿಡುಗಡೆಗೆ ಅಧಿಕಾರಿಗಳು ಕಡೆಯಿಂದ ವಿಳಂಬವಾಗಿದೆ ಎಂದರು.

ದೇವಾಲಯದ ಪಕ್ಕದಲ್ಲಿರುವ ಹೈಮಾಸ್ಕ್ ದೀಪ ದುರಸ್ತಿ ಮಾಡಿಸಿ, ಹೊಸಹಳ್ಳಿ ಗ್ರಾಮದ ರಸ್ತೆಯನ್ನು ದುರಸ್ತಿ ಮಾಡುವಂತೆ ತಹಸೀಲ್ದಾರ್ ಅವರಿಗೆ ಸಭೆಯಲ್ಲಿ ಮನವಿ ಮಾಡಿದರು.

ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ತಾಪಂ ಮಾಜಿ ಸದಸ್ಯರಾದ ಎಂ. ಚಂದ್ರಶೇಖರ್, ಉಪ ತಹಸೀಲ್ದಾರ್ ಲಕ್ಷ್ಮೀ, ಗೌಡರ ಎಂ.ಪಿ. ನಾಗರಾಜು, ಪಿಡಿಓ ಪ್ರಕಾಶ್, ಎಇಇ ಸೆಸ್ಕ್ ಸತೀಶ್ ಚಂದ್ರನ್, ಪಂಚಾಯಿತಿ ರಾಜ್ ಉಪವಿಭಾಗಧಿಕಾರಿ ಚರಿತಾ, ಡಾ. ನಾಗರಾಜು, ಪಾರುಪತ್ಯದಾರ ಎಂ.ಬಿ. ಸಾಗರ್, ಎಎಸ್. ಐ ಮಲ್ಲೇಶ್ ಹಾಗೂ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.