ಹಾವೇರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

| Published : Jul 07 2025, 11:48 PM IST

ಸಾರಾಂಶ

ಸಂಜೆ ವೇಳೆ ಮೆಹಬೂಬ ಸೂಬಾನಿ ದರ್ಗಾ, ದಾವಲ್ ಮಲ್ಲಿಕ್ ದರ್ಗಾ, ಅತ್ತಾರ್‌ಗಲ್ಲಿ, ಸುಭಾಸ್ ವೃತ್ತ, ಬೊರೆಶಾವಲ್ಲಿ ದರ್ಗಾ, ಕೊರವರ ಓಣಿ, ಸೂಲಮಟ್ಟಿ, ಟಿಪ್ಪು ನಗರ(ಮುಲ್ಲಾನಕೆರಿ), ಮನಿಯಾರ್ ಓಣಿ, ಗ್ಯಾರವಿ ದರ್ಗಾದ ಅಲೈ ದೇವರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಹಾವೇರಿ: ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಣೆ ಮಾಡಲಾಯಿತು.ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ನಗರದ ನಾನಾ ಭಾಗದ ಅಲಾಯಿ ದೇವರು ಹಾಗೂ ಡೋಲಿ ಮೆರವಣಿಗೆ, ಅಗ್ನಿಕುಂಡ ಪ್ರವೇಶ ಸೇರಿದಂತೆ ಧಾರ್ಮಿಕ ಕಾರ್ಯಗಳು ಜರುಗಿದವು.

ಸಂಜೆ ವೇಳೆ ಮೆಹಬೂಬ ಸೂಬಾನಿ ದರ್ಗಾ, ದಾವಲ್ ಮಲ್ಲಿಕ್ ದರ್ಗಾ, ಅತ್ತಾರ್‌ಗಲ್ಲಿ, ಸುಭಾಸ್ ವೃತ್ತ, ಬೊರೆಶಾವಲ್ಲಿ ದರ್ಗಾ, ಕೊರವರ ಓಣಿ, ಸೂಲಮಟ್ಟಿ, ಟಿಪ್ಪು ನಗರ(ಮುಲ್ಲಾನಕೆರಿ), ಮನಿಯಾರ್ ಓಣಿ, ಗ್ಯಾರವಿ ದರ್ಗಾದ ಅಲೈ ದೇವರು ನಗರದ ಪ್ರಮುಖ ರಸ್ತೆಗಳಲ್ಲಿ ಅದ್ರಿಧೂ ಮೆರವಣಿಗೆ ನಡೆಸಿದರು.

ಸೋಮವಾರ ಸಂಜೆ ಸುಭಾಸ್ ಸರ್ಕಲ್‌ನಲ್ಲಿ ಒಂದೆ ಕಡೆ ಸೇರಿದ ಎಲ್ಲ ದೇವರುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ದೇವರನ್ನು ಹೊಳೆಗೆ ಕಳುಹಿಸಲಾಯಿತು. ಶಿಗ್ಗಾಂವಿ ತಾಲೂಕಿನಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಶಿಗ್ಗಾಂವಿ: ತಾಲೂಕಿನ ಹಲವು ಕಡೆ ಮೊಹರಂ ಹಬ್ಬವನ್ನು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಹಿಂದೂ- ಮುಸ್ಲಿಂ ಸಮುದಾಯದವರು ಒಟ್ಟಿಗೆ ಆಚರಿಸುವ ಭಾವೈಕ್ಯದ ಹಬ್ಬದಂದು ಪ್ರಮುಖ ರಸ್ತೆಗಳಲ್ಲಿ ಪಂಜಾಗಳ ಮೆರವಣಿಗೆ ನಡೆಯಿತು. ರಸ್ತೆಯುದ್ದಕ್ಕೂ ನೆರೆದಿದ್ದ ಜನರು, ಪಂಜಾಗಳನ್ನು ಹಿಡಿದುಕೊಂಡಿದ್ದವರ ಪಾದಪೂಜೆ ಮಾಡಿದರು. ಸಕ್ಕರೆ ಹಾಗೂ ಊದಿನಕಡ್ಡಿ ಕೊಟ್ಟು ದೇವರಿಗೆ ನೈವೇದ್ಯ ಸಲ್ಲಿಸಿದರು.

ತಾಲೂಕಿನ ಕುನ್ನೂರ, ಬಂಕಾಪುರ, ದುಂಡಶಿ, ಹುಲಗೂರ, ತಡಸ ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.