ಸಾರಾಂಶ
‘ಕಾಲತ್ ರಕಳಿ’ ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ‘ಕಾಲತ್ ರಕಳಿ’ ಎಂಬ ನೂತನ ಕೊಡವ ಚಲನಚಿತ್ರಕ್ಕೆ ಮುಹೂರ್ತ ಪೂಜೆ ಸಲ್ಲಿಸಲಾಯಿತು. ಪಿ ಅಂಡ್ ಜಿ ( P & G) ಕ್ರಿಯೇಶನ್ಸ್ ಅಡಿಯಲ್ಲಿ ಬಾಳೆಯಡ ಪ್ರತಿಷ ಪೂವಯ್ಯಹಾಗೂ ಆಚೆಯಡ ಗಗನ್ ಗಣಪತಿ ನಿರ್ದೇಶನದ ನಾಲ್ಕನೇ ಕೊಡವ ಚಲನಚಿತ್ರ ಇದಾಗಿದ್ದು ಸೋಮೆಂಡ ಬೋಸ್ ಬೆಳ್ಳಿಯಪ್ಪ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇಂದಿನಿಂದ ಚಿತ್ರೀಕರಣ ಪ್ರಾರಂಭಗೊಂಡಿತು.ದೇವಾಲಯದ ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಚಿತ್ರ ತಂಡದ ಪರವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಯಾವುದೇ ವಿಘ್ನ ಕುಂದುಕೊರತೆಗಳಾಗದಂತೆ ಸುಸೂತ್ರವಾಗಿ ಪೂರ್ಣಗೊಳ್ಳಲಿ ಎಂದರು.ಚಲನಚಿತ್ರದ ನಿರ್ದೇಶಕರಾಗಿ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಭಾಷೆ ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ ಈಗಿನ ಕಾಲಘಟ್ಟದಲ್ಲಿ ನಡೆಯುವ ಸಾಮಾಜಿಕ ದುಷ್ಪರಿಣಾಮಗಳ ಕುರಿತ ಸಿನಿಮಾ ಇದಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕು ಎಂದರು.
ಸೋಮೆಂಡ ಬೋಸ್ ಬೆಳ್ಳಿಯಪ್ಪ ಮಾತನಾಡಿ, ಹಲವು ಕಿರು ಚಿತ್ರಗಳನ್ನು ಈಗಾಗಲೇ ನಿರ್ಮಿಸಿದ್ದು ನೂತನ ಸಿನಿಮಾ ಉತ್ತಮ ಚಿತ್ರಕಥೆಯನ್ನು ಹೊಂದಿದೆ ಎಂದರು.ಕಾಲತ್ ರ ಕಳಿ ಚಿತ್ರ ತಾರಾ ಗಣದಲ್ಲಿ ತಾತಂಡ ಪ್ರಭ, ಗೋಪುಡ ದೇಸ್ನ ದೇಚಮ್ಮ, ಮಾಚೇಟಿರ ವಿಕಾಸ್, ಚೇನಂಡ ಗಿರೀಶ್ , ಸಪ್ನಾ , ಪಾಲೆಯಡ ಸುಚಿತ್ರ ಸುಬ್ಬಯ್ಯ,
ಸುಮಿತ್ರ , ಶ್ಯಾಮಲ ಸೇರಿದಂತೆ 50ಕೂ ಹೆಚ್ಚು ಕಲಾವಿದರನ್ನು ಒಳಗೊಂಡಿದೆ. ಛಾಯಾಗ್ರಾಹಕನ ಮತ್ತು ಸಂಕಲನವನ್ನು ಚಂದ್ರಶೇಖರ್( ಪಾಪು )ನಿರ್ವಹಿಸುತ್ತಿದ್ದಾರೆ ಎಂದು ಬಾಳೆಯಡ ಪ್ರತಿಷ್ ಪೂವಯ್ಯ ಮಾಹಿತಿ ನೀಡಿದರು.ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದರೂ, ದೇವ ತಕ್ಕರುಅದ ಪರದಂಡ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣ್ಣಯ್ಯ, ಲೆಫ್ಟಿನಲ್ ಬಿದ್ದಂಡ ನಾಣ್ಣಯ್ಯ , ಅಲ್ಲರಂಡ ವಿಠಲ ಹಾಗೂ ಚಿತ್ರತಂಡ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))