ಮೂಲ್ಕಿ: ಅರಸು ಪ್ರಶಸ್ತಿ ಪ್ರಕಟ

| Published : Nov 11 2024, 12:59 AM IST

ಸಾರಾಂಶ

ಮೂಲ್ಕಿ ಸೀಮೆಯ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ಬಾರಿ ಡಿಸೆಂಬರ್ 22 ರಂದು ನಡೆಯುವ ಅರಸು ಕಂಬಳದಂದು ಬೆಳಗ್ಗೆ 12 ಗಂಟೆಗೆ ಮೂಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಲಿದೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಮೂಲ್ಕಿ ಸೀಮೆಯ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ಬಾರಿ ಡಿಸೆಂಬರ್ 22 ರಂದು ನಡೆಯುವ ಅರಸು ಕಂಬಳದಂದು ಬೆಳಗ್ಗೆ 12 ಗಂಟೆಗೆ ಮೂಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಲಿದೆ ಎಂದು ಮೂಲ್ಕಿ ಅರಮನೆ ಕಚೇರಿ ಪ್ರಕಟಣೆ ತಿಳಿಸಿದೆ.

ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಸಹಭಾಗಿತ್ವದಲ್ಲಿ ನೀಡುವ ಈ ಪ್ರಶಸ್ತಿಗೆ 78 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮೂಲ್ಕಿ ಸೀಮೆ 32 ಗ್ರಾಮ ವ್ಯಾಪ್ತಿಯಲ್ಲಿ ಸಾಧನೆಗೈದ 14 ಜನರನ್ನು ಗುರುತಿಸಿದ್ದು ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕ್ರತರು: ಶ್ರೀ ನಿಪ್ಪಾಣಿ ಪೀಠದ ಪರಮಪೂಜ್ಯ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ( ಸಾಧನ ಪ್ರಶಸ್ತಿ)

ಮರಣೋತ್ತರ ಪ್ರಶಸ್ತಿ : .ಎಚ್ ನಾರಾಯಣ ಸನಿಲ್( ಸಹಕಾರಿ ಕ್ಷೇತ್ರ), ಬಾಬು ಶೆಟ್ಟಿ ಮುಂಬೈ( ಕಂಬಳ ಕ್ಷೇತ್ರ). ಸಂಘ ಸಂಸ್ಥೆಗಳ ವಿಭಾಗ: ಶ್ರೀ ಸುಬ್ರಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಶಿವ ಸಂಜೀವಿನಿ ಸುರಗಿರಿ.ಸಾಹಿತ್ಯ ಕ್ಷೇತ್ರ: ಎಚ್. ಶಕುಂತಲಾ ಭಟ್ ಹಳೆಯಂಗಡಿ, ಪರಮಾನಂದ ಸಾಲಿಯಾನ್ ಸಸಿಹಿತ್ಲು. ಯಕ್ಷಗಾನ ಕ್ಷೇತ್ರ: ಶ್ರೀ ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು, ಸೀತಾರಾಮ್ ಕುಮಾರ್ ಕಟೀಲು. ಕೃಷಿ- ಪರಿಸರ ಕ್ಷೇತ್ರ: ವಾಲ್ಟರ್ ಡಿಸೋಜಾ ಪಕ್ಷಿಕೆರೆ, ವೈದ್ಯಕೀಯ ಕ್ಷೇತ್ರ: ಡಾ. ಹಸನ್ ಮುಬಾರಕ್ ಬೊಳ್ಳೂರು. ಸಾಮಾಜಿಕ ಕ್ಷೇತ್ರ: ಮಾಧವ ಶೆಟ್ಟಿಗಾರ್ ಬೆಳ್ಳಾಯರು( ಮುಕ್ತಿದಾತ), ಚಂದ್ರ ಕುಮಾರ್ ಸಸಿಹಿತ್ಲು. ಶೈಕ್ಷಣಿಕ ಕ್ಷೇತ್ರ: ಮೀರಾಬಾಯಿ ಕೆ ಪಾವಂಜೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.