ಮೂಲ್ಕಿ: ವಿಜಯ ಕಾಲೇಜು ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರ

| Published : Feb 06 2025, 11:46 PM IST

ಸಾರಾಂಶ

ಕೆಮ್ರಾಲ್ ಪಂಜದ ಗುತ್ತು ಶಾಂತರಾಮ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಲ್ಕಿ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಡೆಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಎನ್‌ಎಸ್‌ಎಸ್‌ನಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕಲಿಸುವ ಯೋಜನೆಯಾಗಿದ್ದು, ಭವಿಷ್ಯವನ್ನು ರೂಪಿಸಲು ಉತ್ತಮ ಅವಕಾಶವೆಂದು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಯ್ಯದ್ದಿ ಹೇಳಿದರು.ಪಕ್ಷಿಕೆರೆ ಸಮೀಪದ ಕೆಮ್ರಾಲ್ ಪಂಜದ ಗುತ್ತು ಶಾಂತರಾಮ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಲ್ಕಿ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ವಿಜಯ ಕಾಲೇಜಿನ ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ವಹಿಸಿದ್ದರು. ಸುಬ್ರಮಣ್ಯ ಭಟ್, ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಶಾಲಾ ಮುಖ್ಯಶಿಕ್ಷಕ ಡಾ. ಕಿಶೋರ್ ಕುಮಾರ್ ಶೆಟ್ಟಿ, ಶ್ರೀ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ ಭಟ್, ಪಕ್ಷಿಕೆರೆ ಸೈಂಟ್ ಜೂಡ್ ಚರ್ಚ್‌ ಧರ್ಮಗುರು ಅನಿಲ್ ಅಲ್ಪ್ರೆಡ್‌ ಡಿಸೋಜ, ರಾ.ಸೇ.ಯೋ. ಅಧಿಕಾರಿ ಅರುಣಾ, ಕಾರ್ಯದರ್ಶಿ ಶ್ರಾವ್ಯ ಆದಿತ್ಯ, ಸ್ವಯಂ ಸೇವಕಿ ಸಿಂಚನ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಶಿಬಿರ ನಡೆಯಿತು.

ಪ್ರೊ.ಅರುಣಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರಾವ್ಯ ವಂದಿಸಿದರು. ಸಿಂಚನಾ ನಿರೂಪಿಸಿದರು.