ಸಾರಾಂಶ
ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಮಾತನಾಡಿ ಇಲಾಖೆಗೆ 34 ಗ್ರಾಮಗಳು ಒಳಪಟ್ಟಿದ್ದು ಇದೇ ಪ್ರಥಮ ಬಾರಿಗೆ ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಾಚರಣೆ ನಡೆಸಲು ಎರಡು ಬೋನ್‌ಗಳನ್ನು ಅಳವಡಿಸಲಾಗಿದೆ. ಸ್ಥಳೀಯರ ಸಹಕಾರ ಇದ್ದರೆ ಮಾತ್ರ ಕಾರ್ಯಾಚರಣೆ ಸಾಧ್ಯವೆಂದು ತಿಳಿಸಿದರು.
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಅಕ್ಕಸಾಲಿಗರ ಕೇರಿ ಬಳಿ ಚಿರತೆ ಕಾಟ ವಿಪರೀತವಾಗಿದ್ದು ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಅಧಿಕಾರಿಗಳು ಎರಡು ಬೋನ್ ಅಳವಡಿಸಿದ್ದಾರೆ.
ಅಕ್ಕಸಾಲಿಗರ ಕೇರಿ ಬಳಿ ಬುಧವಾರ ರಾತ್ರಿ ನಾಲ್ಕು ಚಿರತೆ ಮರಿಗಳು ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಅಮೃತ್ ಕಾಮತ್ ಎಂಬವರಿಗೆ ಕಂಡಿವೆ. ಚಿರತೆ ಹಾವಳಿಯಿಂದ ಸಂಜೆ ಹೊತ್ತು ನಾಗರಿಕರು, ಮನೆಯಿಂದ ಹೊರಬರಲು ಹೆದರುತ್ತಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಾಲಚಂದ್ರ ಕಾಮತ್, ಪೊಲೀಸ್ ಠಾಣಾಧಿಕಾರಿ ವಿದ್ಯಾಧರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಇದೀಗ ಬೋನ್ ಅಳವಡಿಸಲಾಗಿದೆ.ಈ ಬಗ್ಗೆ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ಮಾತನಾಡಿ ಇಲಾಖೆಗೆ 34 ಗ್ರಾಮಗಳು ಒಳಪಟ್ಟಿದ್ದು ಇದೇ ಪ್ರಥಮ ಬಾರಿಗೆ ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಚಿರತೆ ಕಾರ್ಯಾಚರಣೆ ನಡೆಸಲು ಎರಡು ಬೋನ್‌ಗಳನ್ನು ಅಳವಡಿಸಲಾಗಿದೆ. ಸ್ಥಳೀಯರ ಸಹಕಾರ ಇದ್ದರೆ ಮಾತ್ರ ಕಾರ್ಯಾಚರಣೆ ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಸದಸ್ಯ ಬಾಲಚಂದ್ರ ಕಾಮತ್, ಸಿಬ್ಬಂದಿ ನವೀನ್ ಚಂದ್ರ, ಸ್ಥಳೀಯರಾದ ಸದಾನಂದ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತ ಅಶ್ವತ್ಥ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.