ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸುಕುಂಜರಾಯ ದೈವಸ್ಥಾನದ ನೂತನ ಭಂಡಾರ ಛಾವಡಿ ಪುನರ್ ನಿರ್ಮಾಣಗೊಳ್ಳುತ್ತಿದ್ದು ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಫೆ.೨೯ ರಿಂದ ಮಾರ್ಚ್ ೧೩ರ ವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ದೈವಸ್ಥಾನ ಮತ್ತು ಭಂಡಾರ ಛಾವಡಿ ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿದ್ದು, ಸುಮಾರು ೫ ಕೋಟಿ ರುಪಾಯಿ ವೆಚ್ಚದಲ್ಲಿ ಅರಸು ಕುಂಜರಾಯ ದೈವದ ಪ್ರಧಾನ ಮಾಡದ ಗುಂಡ, ದೈವಗಳ ನೇಮೋತ್ಸವದ ಕೊಡಿ ಅಡಿ, ನೂತನ ಧ್ವಜ ಮರ, ದೈವಸ್ಥಾನದ ಮೂಡು ಗೋಪುರ, ದೈವಸ್ಥಾನದ ಪಡುಗೋಪುರ, ತೆಂಕು ಗೋಪುರ, ಬಡಗು ಗೋಪುರ, ಮಕರ ತೋರಣ, ದೈವಸ್ಥಾನದ ಮುಂಭಾಗದ ಪ್ರಾಂಗಣ ನಿರ್ಮಾಣ, ಶ್ರೀ ಕರ‍್ದಬ್ಬು ದೈವದ ಕಟ್ಟೆ ಮತ್ತು ಮೇಲ್ಛಾವಣಿ, ಈಶಾನ್ಯ ಕೊಠಡಿ, ನೈವೇದ್ಯ ಕೊಠಡಿ, ಕೊಡಿ ಅಡಿ ಸಾಮಾನುಗಳ ಕೊಠಡಿ, ಆಡಳಿತ ಕಚೇರಿ, ನೂತನ ಸಿಂಹಾಸನ ಕಟ್ಟೆ, ನೂತನ ಬಾವಿ, ನೂತನ ಭಂಡಾರ ಛಾವಡಿ ಹೀಗೆ ಮತ್ತಿತರ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿವೆ. ಪ್ರತಿದಿನ ನೂರಾರು ಕಾರ್ಯಕರ್ತರು ಕರಸೇವೆಯಲ್ಲಿ ಭಾಗಿಯಾಗುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ. ಒಟ್ಟು ೧೪ ದಿನ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
ಇಂದಿನಿಂದ ಬಿ.ಸಿ. ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಜಾತ್ರೆ, ಬ್ರಹ್ಮಕಲಶಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಮಹೋತ್ಸವ ಕಾರ್ಯಕ್ರಮ ಫೆ. 16 ರಿಂದ 23 ರ ವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬ್ರಹ್ಮಕಲಶೋತ್ಸವ ಅಂಗವಾಗಿ ನಾಳೆ ಫೆ.1೬ರಂದು ಸಂಜೆ 3 ಗಂಟೆಗೆ ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದಿಂದ ಕ್ಷೇತ್ರದ ವರೆಗೆ ಹಸಿರುವಾಣಿ ಹೊರೆ ಕಾಣಕೆ ಮೆರವಣಿಗೆ ನಡೆಯಲಿದೆ. ಹಸಿರುಹೊರೆಕಾಣಿಕೆ ಮೆರವಣಿಗೆಯನ್ನು ಶ್ರೀ ರಾಮಕೃಷ್ಣ ತಪೋವನ ಪೊಳಲಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಕುರಿಯಾಳ ರಘನಾಥ ಪಯ್ಯಡೆ ಹಾಗೂ ಉದ್ಯಮಿ ರಘ ಸಪಲ್ಯ ಅವರು ಉದ್ಘಾಟಿಸಲಿದ್ದಾರೆ. 60 ಕ್ಕೂ ಅಧಿಕ ವಾಹನಗಳು ಹಸಿರು ಹೊರೆಕಾಣಿಕೆಯಲ್ಲಿ ಭಾಗವಹಿಸಲಿದೆ ಎಂದು ಅವರು ತಿಳಿಸಿದರು. ಫೆ. 16 ರಿಂದಫೆ.23 ರವರೆಗೆ ನಿತ್ಯ ವೈಧಿಕ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ ಎಂದು ಅವರು ತಿಳಿಸಿದರು.