ಸಾರಾಂಶ
ಹಣ್ಣು,ಹಂಪಲು ಸೇರಿದಂತೆ ವಿವಿಧ ತಳಿಯ ಸುಮಾರು ಐದುಸಾವಿರಕ್ಕೂ ಮಿಕ್ಕಿ ಸಸಿಗಳನ್ನು ಬುಧವಾರದಿಂದ ಶುಕ್ರವಾರದವರೆಗೆ ಉಚಿತವಾಗಿ ವಿತರಿಸಲಾಗುವುದುದೆಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಆಳ್ವ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಆಧುನಿಕತೆಯ ಧಾವಂತದಲ್ಲಿ ಕಾಂಕ್ರೀಟಿಕರಣದಿಂದಾಗಿ ಪಟ್ಟಣಗಳಲ್ಲಿ ಪರಿಸರ ನಾಶವಾಗುತ್ತಿದೆ. ಮರ ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸುವ ಕಾರ್ಯವಾಗಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಮೂಲ್ಕಿಯ ಶ್ರೀ ಕೃಷ್ಣ ಸುಧಾಮ ವೆಲ್ಫೇರ್ ಫೌಂಡೇಶನ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಜರುಗಿದ ಸಾರ್ವಜನಿಕ ಸಸಿ ವಿತರಣೆ ಕಾರ್ಯಕ್ರಮ ‘ಸಸ್ಯೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕ್ಯಾಪ್ಸ್ ಫೌಂಡೇಶನ್, ಬೆಂಗಳೂರಿನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಗಿಡ ಮರಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸುವ ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಲ್ಕಿಯ ಶ್ರೀಕೃಷ್ಣ ಸುಧಾಮ ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷ ಸುನೀಲ್ ಆಳ್ವ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಹಣ್ಣು,ಹಂಪಲು ಸೇರಿದಂತೆ ವಿವಿಧ ತಳಿಯ ಸುಮಾರು ಐದುಸಾವಿರಕ್ಕೂ ಮಿಕ್ಕಿ ಸಸಿಗಳನ್ನು ಬುಧವಾರದಿಂದ ಶುಕ್ರವಾರದವರೆಗೆ ಉಚಿತವಾಗಿ ವಿತರಿಸಲಾಗುವುದುದೆಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಆಳ್ವ ತಿಳಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಶ್ ಕುಮಾರ್ ಸ್ವಾಗತಿಸಿದರು. ನವೀನ್ ರಾಜ್ ವಂದಿಸಿದರು. ವಿನೋದ್ ಸಾಲ್ಯಾನ್ ನಿರೂಪಿಸಿದರು.;Resize=(128,128))
;Resize=(128,128))