ಇಲ್ಲಿನ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥಸಪ್ತಮಿ ವಿಜೃಂಭಣೆಯಿಂದ ನಡೆಯಿತು.

ಮೂಲ್ಕಿ: ಇಲ್ಲಿನ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಥಸಪ್ತಮಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಶ್ರೀ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಿರುದಾವಳಿಗಳೊಂದಿಗೆ ಶಾಂಭವಿ ನದಿ ಸ್ನಾನ, ಶ್ರೀ ದೇವರ ಪೇಟೆ ಸವಾರಿ, ರಥೋತ್ಸವ, ವಸಂತ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಾನಿಧ್ಯ ಹವನ, ಮಹಾ ನೈವೇದ್ಯ, ಮಂಗಳಾರತಿ ದರ್ಶನ ಸೇವೆ, ರಾತ್ರಿ ಪೂಜೆ ದೀಪಾರಾಧನೆ, ರಥೋತ್ಸವ, ನಿತ್ಯೋತ್ಸವ, ಬಂಡಿ ಗರುಡೋತ್ಸವ, ವಸಂತ ಪೂಜೆ, ಭೂರಿ ಸಮಾರಾಧನೆ ನಡೆಯಿತು.