ಸಾರಾಂಶ
ಏ.23ರಂದು ಶತ ಕಲಶ ಸಂಪ್ರೋಕ್ಷಣೆಯು ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಧ್ಯಾಹ್ನ 12.30ಕ್ಕೆ ಕನಾಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ, ಸಂಜೆ 5.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ಭೂರಿಸಮಾರಾಧನೆ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ ನೆರವೇರಲಿದೆ.
ಮೂಲ್ಕಿ: ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ನಡೆದು ಬರುವ ರಥೋತ್ಸವದ ಕಾರ್ಯಕ್ರಮಗಳು ಏ.13ರಿಂದ 17ರ ವರೆಗೆ ನಡೆಯಲಿದೆ. 13ರಂದು ಶನಿವಾರ ಸಂಜೆ 5 ಗಂಟೆಗೆ ಧ್ವಜಾರೋಹಣ, 16ರಂದು ರಾತ್ರಿ ಮೃಗಬೇಟೆ ಉತ್ಸವ ಜರುಗಲಿದೆ.
17ರಂದು ಬೆಳಗ್ಗೆ 9 ಗಂಟೆಗೆ ಶ್ರೀ ವೆಂಕಟರಮಣ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾನೈವೇದ್ಯ ಮಂಗಳಾರತಿ ನಂತರ 12.30ಕ್ಕೆ ಶ್ರೀದೇವರು ಯಜ್ಞಕ್ಕೆ ಹೊರಡುವುದು, ಸಂಜೆ 3.45ಕ್ಕೆ ಯಜ್ಞ ಪೂರ್ಣಾಹುತಿ, 6.,30ಕ್ಕೆ ಬ್ರಹ್ಮರಥೋಹರಣ, ಭೂರಿ ಸಮಾರಾಧನೆ, ರಾತ್ರಿ ಬ್ರಹ್ಮರಥದಲ್ಲಿ ಶ್ರೀ ದೇವರಿಗೆ ದೀಪ ನಮಸ್ಕಾರ, ರಾತ್ರಿ ಪೂಜೆ, ಬ್ರಹ್ಮರಥೋತ್ಸವ, ವಿಶ್ರಾಂತಿಪೂಜೆ, ದೇವದರ್ಶನ ಸೇವೆ, ಚಂದ್ರ ಮಂಡಲ ಉತ್ಸವ, ವಸಂತ ಪೂಜೆ, ಏಕಾಂತ ಶಯನಪೂಜೆ ಕಾರ್ಯಕ್ರಮಗಳು ಜರುಗಲಿವೆ. 18ರಂದು ಬೆಳಗ್ಗೆ 10 ಗಂಟೆಗೆ ಕವಾಟೋದ್ಘಾಟನೆ, ಸಂಜೆ 3.30ಕ್ಕೆ ಅವಭೃತ ಒಕುಳಿ ಉತ್ಸವವು ಜರಗಲಿರುವುದು. ದ್ವಜಾರೋಹಣದಿಂದ ಓಕುಳಿ ಉತ್ಸವದವರೆಗಿನ ಉತ್ಸವದ ದಿನಗಳಲ್ಲಿ ರಾತ್ರಿ ಉತ್ಸವ ಸಮಯ ದೇವದರ್ಶನ ಸೇವೆ ಇರುವುದು. ಏ.23ರಂದು ಶತ ಕಲಶ ಸಂಪ್ರೋಕ್ಷಣೆಯು ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಧ್ಯಾಹ್ನ 12.30ಕ್ಕೆ ಕನಾಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ, ಸಂಜೆ 5.30ಕ್ಕೆ ಮಹಾನೈವೇದ್ಯ, ಮಂಗಳಾರತಿ, ಭೂರಿಸಮಾರಾಧನೆ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ದೇವದರ್ಶನ ಸಹಿತ ನಿತ್ಯೋತ್ಸವ, ಚಂದ್ರಮಂಡಲ ಉತ್ಸವ ವಸಂತಪೂಜೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. 22ರ ವರೆಗೆ ಬೆಳಗ್ಗಿನ ದೇವದರ್ಶನ ಸೇವೆಯು ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.;Resize=(128,128))
;Resize=(128,128))
;Resize=(128,128))
;Resize=(128,128))