ಬಹುಮುಖ ಪ್ರತಿಭೆ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್: ಪ್ರೊ. ಟಿ.ಎನ್.ಪ್ರಭಾಕರ್

| Published : Apr 01 2024, 12:54 AM IST

ಬಹುಮುಖ ಪ್ರತಿಭೆ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್: ಪ್ರೊ. ಟಿ.ಎನ್.ಪ್ರಭಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಪ್ರಶಸ್ತಿ ಪುರಸ್ಕೃತರು, ಕವಿಕಿಶೋರ, ಸಾಹಿತ್ಯಭೂಷಣ, ಹಿರಿಯ ಸ್ವಾತಂತ್ರ್ಯ ಯೋಧರಾದ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಭೀಮನಕೋಣೆ ಅವರು ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ತುರುವೇಕೆರೆ ಟಿ.ನಾರಾಯಣ ಶಾಸ್ತ್ರಿ ಪ್ರತಿಷ್ಠಾನದ ಪ್ರೊ.ಟಿ.ಎನ್.ಪ್ರಭಾಕರ್ ಹೇಳಿದ್ದಾರೆ.

ತರೀಕೆರೆಯಲ್ಲಿ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಅವರ ಜನ್ಮಶತಾಬ್ದಿ ಆಚರಿಸಲು ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಜ್ಯ ಪ್ರಶಸ್ತಿ ಪುರಸ್ಕೃತರು, ಕವಿಕಿಶೋರ, ಸಾಹಿತ್ಯಭೂಷಣ, ಹಿರಿಯ ಸ್ವಾತಂತ್ರ್ಯ ಯೋಧರಾದ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಭೀಮನಕೋಣೆ ಅವರು ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ತುರುವೇಕೆರೆ ಟಿ.ನಾರಾಯಣ ಶಾಸ್ತ್ರಿ ಪ್ರತಿಷ್ಠಾನದ ಪ್ರೊ.ಟಿ.ಎನ್.ಪ್ರಭಾಕರ್ ಹೇಳಿದ್ದಾರೆ.ಪಟ್ಟಣದ ಎ.ವಿ.ನಾಗಭೂಷಣ್ ಅವರ ನಿವಾಸದಲ್ಲಿ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಅವರ ಜನ್ಮಶತಾಬ್ದಿ ಆಚರಿಸಲು ಏರ್ಪಡಿಸಿದ್ದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ವಿದ್ವಾನ್ ಕೆ.ಎಸ್.ಭಾಸ್ಕರ್ ಭಟ್ ಹಿರಿಯ ಸ್ವಾತಂತ್ರ್ಯ ಯೋಧರಾಗಿದ್ದು, ಕನ್ನಡ ಮತ್ತು ಸಂಸ್ಕೃತ ಶಿಕ್ಷಕರಾಗಿ ಹೊನ್ನಾಳಿ, ತುರುವೇಕೆರೆ, ಕಡೂರು, ತರೀಕೆರೆ ಸಾಗರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಅನೇಕ ಕನ್ನಡ ಸಂಸ್ಕೃತ ಕಾವ್ಯಗಳನ್ನು ರಚಿಸಿದ್ದಾರೆ. ಅವರ ಜನ್ಮಶತಾಬ್ದಿಯನ್ನು ಉಪನ್ಯಾಸ ಇತ್ಯಾದಿಗಳ ಮೂಲಕ ಹೆಚ್ಚುಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಆಶಯವನ್ನು ಹೊಂದಲಾಗಿದೆ. ಯುವಕ ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕುರಿತು ಸಮಾಲೋಚನೆ ಸಭೆಯಲ್ಲಿ ಸರ್ವರೂ ಚರ್ಚಿಸಬೇಕು ಎಂದು ಮನವಿ ಮಾಡಿದರು.ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಮಾತನಾಡಿ ಹಿರಿಯರು ಹೇಳಿದ ಹಾಗೆ ಕಾರ್ಯಕ್ರಮ ಸಂಘಟಿಸಿ ಯಶಸ್ವಿಗೊಳಿಸೋಣ ಎಂದು ಹೇಳಿದರು. ಹಿರಿಯ ಅಡಿಟರ್ ಆರ್.ಎನ್.ಶ್ರೀನಿವಾಸ್ ಮಾತನಾಡಿ ವಿದ್ವಾನ್ ಕೆ.ಎಸ್. ಭಾಸ್ಕರ ಭಟ್ ಜನ್ಮಶತಾಬ್ದಿಯಲ್ಲಿ ಉಪನ್ಯಾಸ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಂದು ತಿಳಿಸಿದರು.ಅಂಚೆ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ್ ಮಾತನಾಡಿ ಬ್ರಾಹ್ಮಣ ಸೇವಾ ಸಮಿತಿಯಿಂದ ನಡೆಯುವ ಶ್ರೀ ಶಂಕರ ಜಯಂತಿ, ಶ್ರೀ ರಾಮೋತ್ಸವ, ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ಹಾಗೂ ಪ್ರತಿವರ್ಷ ಡಿಸೆಂಬರ್ ನಲ್ಲಿ ಅಂಚೆ ಪ್ರತಿಷ್ಠಾನದಿಂದ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೋತೃಗಳು ಭಾಗವಹಿಸುತ್ತಾರೆ, ಆದುದರಿಂದ ವಿದ್ವಾನ್ ಕೆ.ಎಸ್.ಭಾಸ್ಕರ ಭಟ್ ಜನ್ಮಶತಾಬ್ದಿ ಆಚರಿಸಲು ಅನುಕೂಲವಾಗುತ್ತದೆ ಈ ವಿಚಾರದಲ್ಲಿ ಹೆಚ್ಚಿನ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.ಮುಖಂಡರಾದ ಎಚ್.ವಿ.ಸತ್ಯನಾರಾಯಣ, ಶಶಿಧರ್ ಭಟ್, ಬಿ. ಎಸ್.ಸುಬ್ರಹ್ಮಣ್ಯ, ಬಿ.ಎಸ್.ಮಂಜುನಾಥ್, ಟಿ.ಎಸ್.ಸುಬ್ರಹ್ಮಣ್ಯ ಟಿ.ಪಿ.ರಾಘವೇಂದ್ರ, ಶ್ರೇಯಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

31ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಎ.ವಿ.ನಾಗಭೂಷಣ್ ನಿವಾಸದಲ್ಲಿ ಏರ್ಪಡಿಸಿದ್ದ ಸಮಾಲೋಚನೆ ಸಭೆಯಲ್ಲಿ ತುರುವೇಕೆರೆ ಟಿ.ನಾರಾಯಣ ಶಾಸ್ತ್ರಿ ಪ್ರತಿಷ್ಠಾನದ ಪ್ರೊ.ಟಿ.ಎನ್.ಪ್ರಭಾಕರ್ ಮಾತನಾಡಿದರು.ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಮುಖಂಡರಾದ ಆರ್.ಎನ್.ಶ್ರೀನಿವಾಸ್, ಎ.ವಿ.ನಾಗಭೂಷಣ್ ಮತ್ತಿತರರು ಇದ್ದರು.