ಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರುತ್ತಿದ್ದು, ಗುರುವಾರ ದೇವಸ್ಥಾನದಲ್ಲಿ ಶತಚಂಡಿ ಹೋಮದ ಪೂರ್ಣಾಹುತಿ ಸಂಪನ್ನ ಗೊಂಡಿತು.ಏ. 5ರಿಂದ ಆರಂಭಗೊಂಡಿದ್ದ ಕಾರ್ಯಕ್ರಮ ಗುರುವಾರ ರಾತ್ರಿ ಮುಕ್ತಾಯ ಕಂಡಿತು. ಗುರುವಾರ ಬೆಳಗ್ಗೆ 9 ಗಂಟೆಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಆಶೀಗ್ರಹಣ, ಮಂತ್ರಾಕ್ಷತೆ ನಡೆಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸಂಜೆ ಭಜನೆ ಕಾರ್ಯಕ್ರಮ ಮತ್ತು ಗಣ್ಯರ ಮತ್ತು ದೇವಸ್ಥಾನದ ಪ್ರಮುಖರ ಉಪಸ್ಥತಿಯಲ್ಲಿ ಸಮಾರೋಪ ನಡೆಯಿತು.
ರಾತ್ರಿ ಶಾಲಾ ಮಕ್ಕಳಿಂದ ಮನೋರಂಜನೆ, ನೃತ್ಯ, ಶ್ರೀ ಮಹಾಸತಿ ಭಜನೆ ಮಂಡಳಿ ಬೆಳ್ಕೆ ಇವರಿಂದ ಕುಣಿತ ಭಜನೆ ಗಮನ ಸೆಳೆಯಿತು. ರಾತ್ರಿ 9 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಊರ ನಾಗರಿಕರು, ಆಡಳಿತ ಮಂಡಳಿಯ ಅಧ್ಯಕ್ಷ ಎಸ್. ಬಿ. ಬೊಮ್ಮಾಯಿ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ವಯಂ ಸೇವಕರು, ಅರ್ಚಕರು ಶ್ರಮಿಸಿದರು.ಪರಾರಿಯಾಗಿದ್ದ ಆರೋಪಿಗೆ ಮತ್ತೆ ಜೈಲು ಶಿಕ್ಷೆಸಿದ್ದಾಪುರ ಕೋರ್ಟಿಗೆ ಬಂದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿ ಭಟ್ಕಳದಲ್ಲಿ ಸಿಕ್ಕಿ ಬಿದ್ದಿದ್ದು, ವಾಪಸ್ ಸಿದ್ದಾಪುರ ಕೋರ್ಟಿಗೆ ಹಾಜರು ಪಡಿಸಲಾಗಿದ್ದು ಆರೋಪಿಗೆ ನ್ಯಾಯಾಲಯ ಮತ್ತೆ 3 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಸೂಚಿಸಿದೆ. ೨೦೨೩ರ ಅವಧಿಯಲ್ಲಿ ಸಿದ್ದಾಪುರದಲ್ಲಿ ನಡೆದ ಪ್ರಕರಣವೊಂದರದಲ್ಲಿ ಶಿವಮೊಗ್ಗ ಶಿಕಾರಿಪುರದ ಹಳ್ಳೂರಕೇರಿಯ ಜಿಯಾವುಲ್ಲಾ 2ನೇ ಆರೋಪಿಯಾಗಿದ್ದರು. ಈ ಹಿನ್ನೆಲೆ ಪೊಲೀಸರು ಜಿಯಾವುಲ್ಲಾ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ಪೊಲೀಸರ ಕಣ್ತಪ್ಪಿಸಿ ಜಿಯಾವುಲ್ಲಾ ಪರಾರಿಯಾಗಿದ್ದರು. 3 ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಜಿಯಾವುಲ್ಲಾ ಅವರನ್ನು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು ಕೂಡಾ ಸುಳಿವು ದೊರೆತಿಲ್ಲವಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಭಟ್ಕಳದಲ್ಲಿ ಬಂದು ದಾಳಿ ಮಾಡಿದಾಗ ಜಿಯಾವುಲ್ಲಾ ಪೊಲೀಸರಿಗೆ ಸಿಕ್ಕಿದ್ದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಏ. ೬ರಂದು ಸಿಕ್ಕಿಬಿದ್ದ ಜಿಯಾವುಲ್ಲಾ ಅವರನ್ನು ಪೊಲೀಸರು ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈ ಹಿಂದೆ ನ್ಯಾಯಾಲಯದಿಂದಲೇ ತಪ್ಪಿಸಿಕೊಂಡು ಪರಾರಿಯಾಗಿದನ್ನು ವಿವರಿಸಿದರು. ನ್ಯಾಯಾಲಯದ ಆವರಣದಲ್ಲಿಯೇ ಉದ್ಧಟತನ ತೋರಿದ ಕಾರಣ ಜಿಯಾವುಲ್ಲಾ ಅವರಿಗೆ ನ್ಯಾಯಾಲಯ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು. ಸಿದ್ದಾಪುರ ಪಿಎಸ್‌ಐ ಶಾಂತಿನಾಥ ಪಾಸಾನೆ, ಪೊಲೀಸ್ ಸಿಬ್ಬಂದಿ ಚೇತನಕುಮಾರ, ಅನಿಲ್ ನಾಯ್ಕ, ಪ್ರಸನ್ನ ನಾಯ್ಕ, ಭರತಕುಮಾರ, ಶಶಿಕಾಂತ ಹಾಗೂ ನ್ಯಾಯಾಲಯ ಸಿಬ್ಬಂದಿ ಮೋಹನ ಲಮಾಣಿ ಈ ಕಾರ್ಯಾಚರಣೆ ನಡೆಸಿದ್ದರು.