ಮುಂಡರಗಿ ವಿಧಾನಸಭಾ ಕ್ಷೇತ್ರ ಪುನರ ರಚನೆಗೆ ಒತ್ತಾಯ

| Published : Nov 17 2024, 01:17 AM IST

ಸಾರಾಂಶ

ಮುಂಡರಗಿ ಶಹರ ಮತ್ತು ಮುಂಡರಗಿ ತಾಲೂಕು ಹಳ್ಳಿಗಳು ಶಿರಹಟ್ಟಿ ಮತಕ್ಷೇತ್ರಕ್ಕೆ ಶಿರಹಟ್ಟಿ ಮತ್ತು ಮುಂಡರಗಿ ಅಂತರ ಸುಮಾರು 65 ರಿಂದ 70 ಕಿಮೀ ಇದ್ದು ಮುಂಡರಗಿ ತಾಲೂಕಿನ ಹಲವಾರು ಗ್ರಾಮಗಳು ರೋಣ ಮತಕ್ಷೇತ್ರಕ್ಕೆ ಸೇರಿಸಲಾಗಿದೆ

ಗದಗ: ಮುಂಡರಗಿ ವಿಧಾನಸಭಾ ಕ್ಷೇತ್ರವನ್ನು ಪುನರ್ ರಚನೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ದೇಸಾಯಿ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಹಲವು ದಶಕಗಳ ಹಿಂದೆ ಮುಂಡರಗಿ ವಿಧಾನಸಭಾ ಕ್ಷೇತ್ರದ ಪುನರ ವಿಂಗಡಣೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಇಂದರಿಂದ ಮುಂಡರಗಿ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿದ್ದು ಮುಂಡರಗಿ ತಾಲೂಕಿನ ಭಾಗದ ಜನತೆಗೆ ಘೋರ ಅನ್ಯಾಯವಾಗಿದೆ. ಮುಂಡರಗಿ ತಾಲೂಕು ಮತ್ತು ಮುಂಡರಗಿ ನಗರ ತಾಲೂಕು ಕೇಂದ್ರವಾಗಿದೆ. ಈ ತಾಲೂಕನ್ನು ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳಿಗೆ ಒಡೆದು ಸೇರಿಸಲಾಗಿದೆ. ಮುಂಡರಗಿ ಶಹರ ಮತ್ತು ಮುಂಡರಗಿ ತಾಲೂಕು ಹಳ್ಳಿಗಳು ಶಿರಹಟ್ಟಿ ಮತಕ್ಷೇತ್ರಕ್ಕೆ ಶಿರಹಟ್ಟಿ ಮತ್ತು ಮುಂಡರಗಿ ಅಂತರ ಸುಮಾರು 65 ರಿಂದ 70 ಕಿಮೀ ಇದ್ದು ಮುಂಡರಗಿ ತಾಲೂಕಿನ ಹಲವಾರು ಗ್ರಾಮಗಳು ರೋಣ ಮತಕ್ಷೇತ್ರಕ್ಕೆ ಸೇರಿಸಲಾಗಿದೆ. ಮುಂಡರಗಿ ಮತ್ತು ರೋಣ ನಡುವಿನ ಅಂತರ 80 ರಿಂದ 90 ಕಿಮೀ ಇರುತ್ತದೆ.

ಈ ರೀತಿ ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡನೆ ಮಾಡಿದ್ದರಿಂದ ಮುಂಡರಗಿ ತಾಲೂಕಿನ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಮುಂಡರಗಿ ತಾಲೂಕಿನ ಶಾಸಕರನ್ನು ಭೇಟಿಯಾಗಲು ಇಬ್ಬರು ಶಾಸಕರನ್ನು ಭೇಟಿಯಾಗಿ ಅಭಿವೃದ್ಧಿ ಸೇರಿದಂತೆ ಇತರೆ ಸಮಸ್ಯೆ ಬಗೆಹರಿಸಿಕೊಳ್ಳಲು ಬಹಳ ತೊಂದರೆಯಾಗುತ್ತಿರುವುದರಿಂದ ಮುಂಡರಗಿ ಶಹರ ಮತ್ತು ಗ್ರಾಮೀಣ ಜನತೆಯು ಸಮಸ್ಯೆ ಸಮರ್ಪಕವಾಗಿ ಪ್ರತಿನಿಧಿಸುವ ಶಾಸಕರು ಇಲ್ಲದ್ದರಿಂದ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತಗೊಂಡಿದೆ. ಈಗಿರುವ ಮುಂಡರಗಿ ತಾಲೂಕು ಶಿರಹಟ್ಟಿ ಮತ್ತು ರೋಣ ಶಾಸಕರಿಂದ ಕಡೆಗಣನೆಗೆ ಒಳಗೊಂಡಿದೆ. ಮುಂಡರಗಿ ತಾಲೂಕಿನಲ್ಲಿ ಯಾವುದೇ ರಾಷ್ಟ್ರೀಯ ಮತ್ತು ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಶಾಸಕರು ಇದುವರೆಗೂ ಹಾಜರಾಗಿರುವುದಿಲ್ಲ.

ಮುಂಬರುವ ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ ಮುಂಡರಗಿ ವಿಧಾನಸಭಾ ಕ್ಷೇತ್ರವನ್ನು ಘೋಷಣೆ ಮಾಡಿ ಈ ಭಾಗದ ಜನತೆಗೆ ಜನಪ್ರತಿನಿಧಿಯನ್ನು ವಿಧಾನಸಭೆಗೆ ಕಳುಹಿಸಿಕೊಡುವ ಅವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.