ಸಾರಾಂಶ
ಮುಂಡರಗಿ ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣ ಬಳಿ ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಕನ್ನಡ ಸಾಹಿತ್ಯ ಭವನದ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ದಾನ ನೀಡಿದ್ದು, ಈಗಾಗಲೇ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹೇಳಿದರು.
ಮುಂಡರಗಿ: ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣ ಬಳಿ ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಕನ್ನಡ ಸಾಹಿತ್ಯ ಭವನದ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ದಾನ ನೀಡಿದ್ದು, ಈಗಾಗಲೇ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಹೇಳಿದರು.
ಅವರು ಪಟ್ಟಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಭವನಕ್ಕೆ ಬಾಗಿಲು ಪೂಜೆ ನೆರವೇರಿಸಿ ಮಾತನಾಡಿದರು.ಕನ್ನಡ ಅಭಿಮಾನಿಗಳ, ಸಾಹಿತ್ಯಾಸಕ್ತರ ದೇಣಿಗೆ ಮತ್ತು ಜ.ಡಾ. ಅನ್ನದಾನೀಶ್ವರ ಶ್ರೀಗಳ ಸಹಕಾರದಲ್ಲಿ ಸುಮಾರು 85 ಲಕ್ಷ ರು.ಗಳ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಸುಮಾರು 50 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ, ದಾನಿಗಳಿಂದ 12ಲಕ್ಷ ರು.ಗಳ ದೇಣಿಗೆ ಸಂಗ್ರಹವಾಗಿದ್ದು, ಅದು ಕಟ್ಟಡಕ್ಕೆ ವಿನಿಮಯ ಮಾಡಲಾಗಿದೆ.
ಇದು ಉದ್ಘಾಟನೆಗೊಂಡ ನಂತರ ಪಟ್ಟಣದಲ್ಲಿನ ಅನೇಕ ಸಾಹಿತ್ಯ ಚಟುವಟಿಕೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವುದು ಎಂದರು. ಈ ಸಂದರ್ಭದಲ್ಲಿ ಕಸಾಪ ಉಪಾಧ್ಯಕ್ಷ ಶಂಕರ ಕುಕನೂರ, ಹಿರಿಯರಾದ ವೀರನಗೌಡ ಗುಡದಪ್ಪನವರ, ಎ.ವೈ.ನವಲಗುಂದ, ದೇವೇಂದ್ರಪ್ಪ ರಾಮೇನಹಳ್ಳಿ, ಸಿ.ಎಸ್.ಅರಸನಾಳ, ಎಂ.ಎಸ್. ಹೊಟ್ಟಿನ, ಕಾರ್ಯದರ್ಶಿ ವೀಣಾ ಪಾಟೀಲ, ಮಂಜುನಾಥ ಮುಧೋಳ, ಕಾರ್ಯಕಾರಿಣಿ ಸದಸ್ಯರಾದ ಡಿ.ಸಿ. ಮಠ, ಸಿ.ಕೆ. ಗಣಪ್ಪನವರ, ಕಾಶಿನಾಥ ಬಿಳಿಮಗ್ಗದ, ಕೃಷ್ಣ ಸಾಹುಕಾರ, ಸುರೇಶ ಬಾವಿಹಳ್ಳಿ, ಮಂಜುಳಾ ಇಟಗಿ, ಸಿ.ಕೆ. ಗಣಪ್ಪನವರ, ರಮೇಶ ಪಾಟೀಲ, ಎಸ್.ಬಿ. ಹಿರೇಮಠ, ಎನ್.ಎನ್. ಕಲಕೇರಿ, ಕಾವೇರಿ ಬೋಲಾ, ಹಾಲಯ್ಯ ಹಿರೇಮಠ, ಅಭಿಯಂತರ ಎಸ್.ಡಿ. ಚವಡಿ, ಆರ್.ಕೆ.ರಾಯನಗೌಡ, ಎಸ್.ಸಿ.ಚಕ್ಕಡಿಮಠ, ವಿಶ್ವನಾಥ ಉಳ್ಳಾಗಡ್ಡಿ, ವೆಂಕಟೇಶ ಗುಗ್ಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.