ಸಾರಾಂಶ
ಚಿಂತಾಮಣಿ ನಗರದ ಚೌಡಾರೆಡ್ಡಿಪಾಳ್ಯದ ನಗರಸಭಾ ಸದಸ್ಯ ಮಹಮದ್ ಶಫೀಕ್ ಅನರ್ಹಗೊಂಡ ಹಿನ್ನೆಲೆ ನಡೆಯುವ ಉಪ ಚುನಾವಣೆ
ಕನ್ನಡಪ್ರಭ ವಾರ್ತೆ ಚಿಂತಾಮಣಿಚಿಂತಾಮಣಿ ನಗರದ ವಾರ್ಡ್ ನಂ. ೧೮ರ ಚೌಡರೆಡ್ಡಿಪಾಳ್ಯದ ನಗರಸಭಾ ಸದಸ್ಯ ಮಹಮದ್ ಶಫೀಕ್ ಸ್ಥಾನವು ಅನರ್ಹಗೊಂಡ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಲಿದ್ದು, ನಾಮತ್ರ ಸಲ್ಲಿಸಲು ಡಿ.೧೫ ಕೊನೆಯ ದಿನವಾದ ಇಂದು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಗರಸಭೆಗೆ ಧಾವಿಸಿ ಚುನಾವಣಾಧಿಕಾರಿ ಕವಿತರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದಿಂದ ಮಹಮದ್‌ಶಫೀಕ್ , ಬಿಜೆಪಿಯಿಂದ ಸೂರ್ಯಪ್ರಕಾಶ್, ಕೆಆರ್‌ಎಸ್‌ನಿಂದ ಆರ್.ರವಿಕುಮಾರ್ ಜೆಡಿಎಸ್‌ನಿಂದ ಮುನಾವರ್‌ಪಾಷ, ಎಸ್‌ಡಿಪಿಐಯಿಂದ ಅನ್ಸರ್‌ಪಾಷ, ಶಂಶುದ್ದೀನ್, ಸ್ವತಂತ್ರ ಅಭ್ಯರ್ಥಿಗಳಾಗಿ ಮಹಮದ್ ಮುಬಾರಕ್, ಸೈಯದ್‌ಅರ್ಶಿಯಾ, ಬಿ.ಅಯೂಬ್‌ಖಾನ್ ಸೇರಿದಂತೆ ಒಟ್ಟು ೯ ಮಂದಿ ನಾಮಪತ್ರಗಳನ್ನು ಸಲ್ಲಿಸಿದರು.ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಶಫೀಕ್ ಮಾತನಾಡಿ, ನನಗೆ ಸಚಿವ ಡಾ.ಎಂ.ಸಿ.ಸುಧಾಕರ್ ಬಿ ಫಾರಂ ಕೊಟ್ಟಿದ್ದು, ಉಪ ಚುನಾವಣೆಯಲ್ಲಿ ಜಯಗಳಿಸುತ್ತೇನೆಂಬ ಭರವಸೆ ನನಗೆ ಇದೆ. ನಮ್ಮ ಕುಟುಂಬವು ೬೦ ವರ್ಷಗಳಿಂದಲೂ ರಾಜಕೀಯ ಮಾಡಿಕೊಂಡು ಬಂದಿದ್ದು, ವಾರ್ಡಿನ ಮತದಾರರು ಇದುವರೆವಿಗೂ ನಮ್ಮನ್ನು ವಾರ್ಡ್‌ನ ಮತದಾರರ ಬಿಟ್ಟಿಲ್ಲ. ಮುಂದೆಯೂ ಬಿಡುವುದಿಲ್ಲವೆಂಬ ನಂಬಿಕೆಯಿದೆ. ಮತದಾರರು ಈ ಬಾರಿಯೂ ನನ್ನನ್ನು ಗೆಲ್ಲಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಕುರುಟಹಳ್ಳಿ ಕೃಷ್ಣಮೂರ್ತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ನಾ
ಮಪತ್ರ ಸಲ್ಲಿಸಿದ ಮತ್ತೊಬ್ಬ ಅಭ್ಯರ್ಥಿ ಜೆಡಿಎಸ್ ನ ಮುನಾವರ್ ಪಾಷ (ಎಂಎಲ್‌ಎ) ಮಾತನಾಡಿ, ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಜೆಡಿಎಸ್ ಪಕ್ಷದಿಂದ ಬಿ ಫಾರಂ ಕೊಟ್ಟಿದ್ದು, ನಾನು ಕಳೆದ ಮೂರು ದಶಕಗಳಿಂದ ದಿವಂಗತ ಕೆಎಂ ಕೃಷ್ಣರೆಡ್ಡಿಯವರೊಂದಿಗೆ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದು, ವಾರ್ಡಿನ ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿದ್ದೇನೆ. ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆಂಬ ಭರವಸೆ ವ್ಯಕ್ತಪಡಿಸಿದರು. ಜೆಡಿಎಸ್ ನ ನಗರಸಭಾ ಸದಸ್ಯ ಪ್ರಕಾಶ್, ಮಾಜಿ ನಗರಸಭಾ ಸದಸ್ಯ ವೆಂಕಟರವಣಪ್ಪ, ಅನಿಲ್, ಎಲ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು.ಬಿಜೆಪಿ ಪಕ್ಷದ ಅಭ್ಯರ್ಥಿ ಸೂರ್ಯ ಪ್ರಕಾಶ್ ಮಾತನಾಡಿ ನಾನು ಮೂರು ಬಾರಿ ಸ್ಪರ್ಧಿಸಿ ಸೋತ್ತಿದ್ದರೂ ಜನರೊಂದಿಗೆ ಸದಾಕಾಲ ಇದ್ದು ಎಲ್ಲರೊಂದಿಗೆ ಒಡನಾಟ ಇಟ್ಟುಕೊಂಡಿರುತ್ತೇನೆ. ಅನುಕಂಪದ ಅಲೆ ತಮ್ಮ ಮೇಲೆಯಿದ್ದು ಮತದಾರರು ಈ ಬಾರಿ ನನ್ನನ್ನು ಗೆಲ್ಲಿಸುತ್ತಾರೆಂದರು. ಮುಖಂಡ ದೇವನಹಳ್ಳಿ ವೇಣುಗೋಪಾಲ್, ಮಹೇಶ್ ಬೈ, ಸಿ ಆರ್ ವೆಂಕಟೇಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.