ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರು ಪರಿಹಾರ ನೀಡಿದ್ದಾರೆ-ಶಾಸಕ ಪಾಟೀಲ

| Published : Mar 10 2025, 12:16 AM IST

ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರು ಪರಿಹಾರ ನೀಡಿದ್ದಾರೆ-ಶಾಸಕ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರೆಲ್ಲರೂ ಕೂಡಿಕೊಂಡು ಪರಿಹಾರ ನೀಡಿದ್ದು, ಅನುಕೂಲ ಇದ್ದವರು ನಿಮಗೆ ನೀಡಿದ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಿ, ಯಾರದ್ದು ಭಯ ಬೇಡ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಗಜೇಂದ್ರಗಡ: ಪಟ್ಟಣದಲ್ಲಿ ಕೊನೆಗಾಣದ ಸಮಸ್ಯೆಗೆ ಪುರಸಭೆ ಅಧ್ಯಕ್ಷರು, ಸದಸ್ಯರೆಲ್ಲರೂ ಕೂಡಿಕೊಂಡು ಪರಿಹಾರ ನೀಡಿದ್ದು, ಅನುಕೂಲ ಇದ್ದವರು ನಿಮಗೆ ನೀಡಿದ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಿ, ಯಾರದ್ದು ಭಯ ಬೇಡ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್‌ದಲ್ಲಿ ಶನಿವಾರ ನಡೆದ ಪುರಸಭೆ ವ್ಯಾಪ್ತಿಯ ಉಣಚಗೇರಿ ರಿ.ಸಂ ನಂ ೧೮೩/೧ ಹಾಗೂ ೧೮೩/೩ ರ ಆಶ್ರಯ ಬಡಾವಣೆಯಲ್ಲಿನ ಮಂಜೂರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಇ ಆಸ್ತಿ (ನಮೂನೆ-೩) ಉತಾರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರದ ಅಭಿವೃದ್ಧಿ ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಾನು ಬದ್ಧನಿದ್ದೇನೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ಇವರು ಒಂದು ಮನೆಯನ್ನು ಕಟ್ಟಿಲ್ಲ, ಕಟ್ಟಿದ ಮನೆಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲ. ಆದರೆ ೨೦೧೩-೧೮ರವರೆಗೆ ೧೫ ಲಕ್ಷ ಮನೆಗಳನ್ನು ಕಟ್ಟಿದ್ದರು. ನಿಮ್ಮೆಲ್ಲರ ಆರ್ಶೀವಾದದಿಂದ ಬಜೆಟ್‌ನಲ್ಲಿ ೩ ಲಕ್ಷ ಮನೆಗಳನ್ನು ಕಟ್ಟಲು ಸಿಎಂ ಆಗಿರುವ ಸಿದ್ಧರಾಮಯ್ಯ ಘೋಷಿಸಿದ್ದಾರೆ ಎಂದ ಅವರು, ಕಾಂಗ್ರೆಸ್ ಸರ್ಕಾರವು ಶಿಕ್ಷಣ, ಆರೋಗ್ಯ ಹಾಗೂ ನೀರು ಪೂರೈಕೆಗೆ ಆದ್ಯತೆ ನೀಡಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಂದಾಜು ರು.೬೦ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.ಪ್ರಾಸ್ತಾವಿಕವಾಗಿ ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಪಟ್ಟಣದ ೨೩ ವಾರ್ಡ್‌ಗಳಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಬಡಾವಣೆಯಲ್ಲಿ ಇ ಆಸ್ತಿ ಉತಾರಗಳನ್ನು ನೀಡುವ ಮೂಲಕ ಸರ್ವರಿಗೂ ಸೂರು ನೀಡಲು ಮುಂದಾಗಿದ್ದಾರೆ ಎಂದರು.ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ, ಪ್ರಸ್ತುತ ಉದ್ದೇಶದ ಯೋಜನೆ ರಾಜಕೀಯ ಕಾರಣಗಳಿಂದ ಬದಲಾಗಿತ್ತು. ಆದರೆ ಈಗ ಶಾಸಕ ಜಿ.ಎಸ್. ಪಾಟೀಲ ಅವರು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಶಾಶ್ವತ ಸೂರು ನೀಡಲು ದೃಢ ಸಂಕಲ್ಪ ಮಾಡಿದ್ದಾರೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮೂದಿಯಪ್ಪ ಮುಧೋಳ, ಸದಸ್ಯರಾದ ಮುರ್ತುಜಾ ಡಾಲಾಯತ, ವೆಂಕಟೇಶ ಮುದಗಲ್, ಲಕ್ಷ್ಮೀ ಮುಧೋಳ, ವಿಜಯಾ ಮಳಗಿ ಹಾಗೂ ಎಚ್.ಎಸ್. ಸೋಂಪುರ, ರಫೀಕ್ ತೋರಗಲ್, ಮಂಗಲಾ ದೇಶಮುಖ, ಬಸವರಾಜ ಹೂಗಾರ, ಉಮೇಶ ರಾಠೋಡ, ಯಲ್ಲಪ್ಪ ಬಂಕದ, ಸಿದ್ದಪ್ಪ ಚೋಳಿನ, ಹಸನ ತಟಗಾರ, ಮುತ್ತಣ್ಣ ಮ್ಯಾಗೇರಿ, ಗುಲಾಂ ಹುನಗುಂದ ಸೇರಿ ಇತರರು ಇದ್ದರು.