ಪುರಸಭೆ ಅಧ್ಯಕ್ಷರ ಜನ್ಮದಿನ ಆಚರಣೆ

| Published : Sep 21 2024, 01:51 AM IST

ಸಾರಾಂಶ

ಪಾವಗಡ: ತಾಲೂಕು ಯುವ ಕಾಂಗ್ರೆಸ್ ಸಮಿತಿ ಇತರೆ ಮುಖಂಡರು ಸೇರಿ ಪುರಸಭೆ ಅಧ್ಯಕ್ಷರಾದ ಪಿ.ಎಚ್‌.ರಾಜೇಶ್‌ ಅವರ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಪಾವಗಡ: ತಾಲೂಕು ಯುವ ಕಾಂಗ್ರೆಸ್ ಸಮಿತಿ ಇತರೆ ಮುಖಂಡರು ಸೇರಿ ಪುರಸಭೆ ಅಧ್ಯಕ್ಷರಾದ ಪಿ.ಎಚ್‌.ರಾಜೇಶ್‌ ಅವರ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್‌ ಅವರ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಾ,ಯುವ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿ ಕೇಕ್‌ ಕಟ್‌ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ಪಿ.ಎಚ್‌.ರಾಜೇಶ್ ಅವರಿಗೆ ಶುಭಾಶಯ ಕೋರಿದರು.

ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಫ್‌, ಆರೋಗ್ಯಧಿಕಾರಿ ಶಂಷುದ್ದೀನ್‌,ಲೆಕ್ಕಾಪರಿಶೋಧಕ ಹರೀಶ್‌ ಹಾಗೂ ಮುಖಂಡರಾದ ತೆಂಗಿನಕಾಯಿ ರವಿ,ರಿಜ್ವಾನ್‌ ಷಾಬಾಬು ಮತ್ತು ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಸುಜಿತ್ ಕುಮಾರ್‌,ಗುಟ್ಟಹಳ್ಳಿ ರಾಮಲಿಂಗಪ್ಪ,ಗಂಗಾಧರ್‌,ರವೀಶ್,ಗೋವಿಂದ ಮಣಿ ಪಳವಳ್ಳಿ ಮಂಜು ಇತರೆ ಅನೇಕ ಮಂದಿ ಭಾಗವಹಿಸಿ ಶುಭಕೋರಿದರು.